ಕೇಜ್ರಿವಾಲ್ ಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ..!

ಕೇಜ್ರಿವಾಲ್ ಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ..!

ನವದೆಹಲಿ: ಕಳೆದ ತಿಂಗಳಿಂದಲೇ ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಹೌದು, ದೆಹಲಿ ಸಿಎಂ ಗೆ ಈಗ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಮೇ 20ರ ವರೆಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ನ್ಯಾಯಾಂಗ ಬಂಧನ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.

ದೆಹಲಿ ಕೋರ್ಟ್ ನ ದ್ವಿ ಸದಸ್ಯ ನ್ಯಾಯಪೀಠದಲ್ಲಿ ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪೀಠ ಮೇ 20ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿತು.

ಇದನ್ನೂ ಓದಿ:ಪ್ರಜ್ವಲ್ ವಿರುದ್ಧ ‘ಬ್ಲೂ ಕಾರ್ನರ್ ‘ ನೋಟಿಸ್ ಜಾರಿ

ಪಿತೂರಿ ಆರೋಪ

ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು, ‘ಇಡಿ ಸಂಗ್ರಹಿಸಿದ ವಿಷಯವು ಅರವಿಂದ್ ಕೇಜ್ರಿವಾಲ್ ಇತರರೊಂದಿಗೆ ಪಿತೂರಿ ನಡೆಸಿರುವುದನ್ನು ಬಹಿರಂಗಪಡಿಸುತ್ತದೆ. ಗೋವಾ ಚುನಾವಣೆಯಲ್ಲಿ ಹವಾಲಾ ಹಣ ಬಳಕೆಯಾಗಿದೆ ಎಂಬುದಕ್ಕೆ ಜಾರಿ ನಿರ್ದೇಶನಾಲಯ ಸಾಕ್ಷ್ಯಾಧಾರಗಳನ್ನು ನೀಡಿದೆ. ಹೀಗಾಗಿ ಕೇಜ್ರಿವಾಲ್ ಬಂಧನ ಕಾನೂನಿಗೆ ವಿರುದ್ಧವಾಗಿಲ್ಲ, ರಿಮಾಂಡ್ ಅನ್ನು ಅಕ್ರಮ ಎಂದು ಕರೆಯಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.

 

Related