ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಮಾಜಿ ಪ್ರಧಾನಿ ಫಸ್ಟ್ ರಿಯಾಕ್ಷನ್ ಏನು..?

ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಮಾಜಿ ಪ್ರಧಾನಿ ಫಸ್ಟ್ ರಿಯಾಕ್ಷನ್ ಏನು..?

ಬೆಂಗಳೂರು: ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ವ್ಯಸಗಿ ಅಶ್ಲೀಲ ವಿಡಿಯೋ ಮಾಡಿರುವ ಪ್ರಕಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಈಗಾಗಲೇ ಚುರುಕನಿಂದ ವಿಚಾರಣೆ ನಡೆಯುತ್ತಿದ್ದು, ವಿದೇಶದಲ್ಲಿ ತಲೆಮರಿಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರ ಹುಡುಕಾಟದಲ್ಲಿ ಎಸ್ಐಟಿ ಅಧಿಕಾರಿಗಳು ಬಿರುಸಿನ ಕಾರ್ಯಚರಣೆ ನಡೆಸಿದ್ದಾರೆ.

ಇನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಇಂದು  (ಶನಿವಾರ ಮೇ18) ರಂದು ಮೊದಲ ಬಾರಿ ಪ್ರತಿಕ್ರಿಯೆಸಿದ್ದು ಪ್ರಜ್ವಲ್ ದೇವರಾಜ್ ಅವರ ಬಗ್ಗೆ ಕುಮಾರಸ್ವಾಮಿಯವರೇ ಎಲ್ಲಾ ವಿವರಗಳನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ದೇವೇಗೌಡ್ರ ಹುಟ್ಟುಹಬ್ಬಕ್ಕೆ ಗಣ್ಯಾತಿ ಗಣ್ಯರಿಂದ ಶುಭ ಕೋರಿಕೆ

ನಗರದಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರಿಗೆ ಒಂದು ಪ್ರಕರಣಲ್ಲಿ ಜಾಮೀನು ಸಿಕ್ಕಿದೆ ಮತ್ತೊಂದರ ವಿಚಾರಣೆ ನಡೆಯುತ್ತಿದ್ದು ಸೋಮವಾರದಂದು ಕೋರ್ಟ್ ತನ್ನ ತೀರ್ಪು ನೀಡಲಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ತಾವು ಅದರ ಬಗ್ಗೆ ಮಾತಾಡಲ್ಲ ಎಂದ ದೇವೇಗೌಡರು, ರೇವಣ್ಣರ ವಿರುದ್ಧ ಸುಳ್ಳು ಪ್ರಕರಣಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ನೋವು ಮತ್ತು ವಿಷಾದದಿಂದ ಹೇಳಿದರು.

ಪ್ರಜ್ವಲ್ ಬಗ್ಗೆ ಮಾತಾಡಿದ ಮಾಜಿ ಪ್ರಧಾನಿಯವರು, ಅವರೀಗ ಹೊರದೇಶದಲ್ಲಿದ್ದಾರೆ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ತಮ್ಮ ಕುಟುಂಬದ ಪರವಾಗಿ ಹೆಚ್ ಡಿ ಕುಮಾರಸ್ವಾಮಿಯವರು ಸ್ಪಷ್ಟವಾದ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಅಂದಿದ್ದಾರೆ. ಆದರೆ, ಇಡೀ ಪ್ರಕರಣದಲ್ಲಿ ಬೇರೆ ಜನ ಸಹ ಶಾಮೀಲಾಗಿದ್ದಾರೆ ಅವರಿಗೂ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತೆಯರಿಗೆ ಪರಿಹಾರ ಸಿಗಬೇಕು ಎಂದು ದೇವೇಗೌಡ ಹೇಳಿದರು.

Related