ಪ್ರಜ್ವಲ್ ವಿರುದ್ಧ ‘ಬ್ಲೂ ಕಾರ್ನರ್ ‘ ನೋಟಿಸ್ ಜಾರಿ

ಪ್ರಜ್ವಲ್ ವಿರುದ್ಧ ‘ಬ್ಲೂ ಕಾರ್ನರ್ ‘ ನೋಟಿಸ್ ಜಾರಿ

ಬೆಂಗಳೂರು: ಜೆಡಿಎಸ್ ನ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ.

ಇನ್ನು ಪ್ರಜ್ವಲ್ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಅನ್ನು ಜಾರಿ ಮಾಡಲಾಗಿದ್ದು, 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿರುವುದಾಗಿ ಇಂಟರ್ ಫೋಲ್ ಮಾಹಿತಿ ನೀಡಿರುವುದಾಗಿ ವಿಶೇಷ ತನಿಖಾ ತಂಡ- ಎಸ್ ಐಟಿ ತಿಳಿಸಿದೆ.

ಇದನ್ನೂ ಓದಿ: ಡಿಸಿಎಂ ರನ್ನು ಸಂಪುಟದಿಂದ ವಜಾ ಮಾಡಬೇಕು: ಜಿಟಿ ದೇವೇಗೌಡ

ಪ್ರಜ್ವಲ್ ರೇವಣ್ಣ ಯಾವುದೇ ವಿಮಾನ ನಿಲ್ದಾಣ, ಬಂದರು, ಗಡಿಯಲ್ಲಿ ಕಾಣಿಸಿಕೊಂಡರೆ ಮಾಹಿತಿ ನೀಡಲಾಗುವುದು ಎಂದು ಇಂಟರ್ಫೋಲ್ ನಿಂದ ಎಸ್ ಐಟಿಗೆ ನಿನ್ನೆ ಸಂಜೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಒಬ್ಬ ವ್ಯಕ್ತಿಯ ಕುರಿತಾಗಿ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲು, ಆತನ ಗುರುತು, ಆತ ಇರುವ ನಿಖರ ಸ್ಥಳ ಹಾಗೂ ಆತನ ಚಟುವಟಿಕೆಗಳನ್ನು ಗಮನಿಸಿ ಅಪರಾಧಿಕ ಕೃತ್ಯಗಳ ತನಿಖಾ ತಂಡಕ್ಕೆ ನೆರವಾಗಲು ಬ್ಲೂ ನೋಟಿಸ್ ಜಾರಿ ಮಾಡಲಾಗುತ್ತದೆ. ಸದ್ಯ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇದೇ ನೋಟಿಸ್ ಜಾರಿಯಾಗಿದೆ.

 

Related