ಪ್ರಯಾಣಿಕರಿಗೆ ಪಲ್ಲಕ್ಕಿ ರೆಡಿ: ರಾಮಲಿಂಗ ರೆಡ್ಡಿ

ಪ್ರಯಾಣಿಕರಿಗೆ ಪಲ್ಲಕ್ಕಿ ರೆಡಿ: ರಾಮಲಿಂಗ ರೆಡ್ಡಿ

ಬೆಂಗಳೂರು: ಕೆ ಎಸ್ ಆರ್ ಟಿ ಸಿ ನಿಗಮ ಈಗಾಗಲೇ ವಿವಿಧ ರೀತಿಯ ಬಸ್ಸುಗಳನ್ನು ರಸ್ತೆಗೆಳಿಸಿದ್ದು, ಇತ್ತೀಚಿಗಷ್ಟೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಯಾಣಿಕರ ಸೌಲಭ್ಯಕ್ಕಾಗಿ ಹೆಚ್ಚಿನ ಆಸಕ್ತಿ ವಹಿಸಿ ಕರ್ನಾಟಕ ರಾಜ್ಯದಾದ್ಯಂತ ವಿನೂತನವಾಗಿ ಪಲ್ಲಕ್ಕಿ ಬಸ್ ಗಳನ್ನು ರಸ್ತೆಗಳಿಸಿದ್ದಾರೆ.

ಯೆಸ್…ಕರ್ನಾಟಕ ರಾಜ್ಯದಾದ್ಯಂತ ಇನ್ಮುಂದೆ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣಿಸು ಪ್ರಯಾಣಿಕರಿಗೆ ಇನ್ನಷ್ಟು ಸೌಕರ್ಯಗಳನ್ನು ಒದಗಿಸುವುದಕ್ಕೋಸ್ಕರ ಇನ್ನು ಮುಂದೆ ಕೆ ಎಸ್ ಆರ್ ಟಿ ಸಿ  ನಿಗಮದಿಂದ ಸುಮಾರು 13.5 ಮೀಟರ್ ಉದ್ದದ ಹವಾ ನಿಯಂತ್ರಣದ ಸ್ಲೀಪರ್ ಬಸ್ ಗಳನ್ನು ಹೈಪರ್ ಕ್ಲಾಸ್ಗಳಲ್ಲಿ ನಿರ್ಮಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.

ಇನ್ನು ಬಸ್ ಗಳ ವಿನ್ಯಾಸ, ಸೌಲಭ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಮಲಿಂಗಾ ರೆಡ್ಡಿ ಅವರು, ಈ ಬಸ್ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಜೊತೆ ನಡೆಸಿರುವ ಚರ್ಚೆ ಕುತೂಹಲ ಕೆರಳಿಸಿದೆ.

ಅಶೋಕ್ ಲೇಲ್ಯಾಂಡ್ ಕಂಪನಿಯು 13.5 ಮೀ ಉದ್ದದ 36 ಬರ್ತ್ ಸಾರ್ಮಥ್ಯವುಳ್ಳ ಹವಾ ನಿಯಂತ್ರಿತ ಪೂರ್ಣ ನಿರ್ಮಿತ ಸ್ಲೀಪರ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈ ವಾಹನವನ್ನು‌ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಶನಿವಾರ ಪರಿವೀಕ್ಷಣೆ ನಡೆಸಿದರು‌ ಬಸ್ಸಿನ ಒಳಾಂಗಣ ಹಾಗೂ ಹೊರಾಂಗಣವನ್ನು ವೀಕ್ಷಿಸಿ, ಪರಿಶೀಲಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದ್ದನ್ನೂ ಓದಿ: ಅಂಜಲಿ ಕುಟುಂಬ ಭೇಟಿಯಾದ ಸಂತೋಷ್ ಲಾಡ್

ಈಗಾಗಲೇ KSRTCಯಲ್ಲಿ ಇದೇ ಮಾದರಿಯ ನಾನ್ ಎಸಿ ಸ್ಲೀಪರ್ ಬಸ್ಸುಗಳನ್ನು ಪಲ್ಲಕ್ಕಿ ಎಂಬ ಹೆಸರಿನೊಂದಿಗೆ ಪ್ರಾರಂಭಿಸಲಾಗಿದೆ. ಇನ್ನೂ 40 ಬಸ್ಸುಗಳ ಖರೀದಿಗೆ ಈಗಾಗಲೇ ಆದೇಶ ನೀಡಲಾಗಿದೆ. ಈ ಮಾದರಿಯ ಬಸ್ಸುಗಳು ಖಾಸಗಿಯವರೊಂದಿಗೆ ಪೈಪೋಟಿ ‌ನೀಡಲು ಸಾರಿಗೆ ಸಂಸ್ಥೆಗೆ ಅವಶ್ಯಕತೆಯಿದೆ ಎಂದು ಸಚಿವರು ಹೇಳಿದರು. ಇತ್ತಿಚಿನ ದಿನಗಳಲ್ಲಿ ಪ್ರಯಾಣಿಕರು ಉತ್ತಮ ದರ್ಜೆಯ ಸೇವೆಯನ್ನು ನಿರೀಕ್ಷಿಸುತ್ತಾರೆ ಎಂದು ಅವರು ತಿಳಿಸಿದರು.

 

Related