ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಸರ್ಕಾರಿ ಶಿಕ್ಷಕ

ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಸರ್ಕಾರಿ ಶಿಕ್ಷಕ

ಕೆಂಭಾವಿ : ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಹಳೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಯಾವುದೇ ತಳಿರು, ತೋರಣಗಳಿಲ್ಲದೆ ಬೇಕಾಬಿಟ್ಟಿಯಾಗಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕನೋರ್ವ ರಾಷ್ಟ್ರ ಧ್ವಜಕ್ಕೆ ಅಪಮಾನ ತೋರಿದ ಘಟನೆ ನಡೆದಿದೆ.

72 ನೇ ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡುವ ವೇಳೆ ಅಗೌರವ ತೋರುವ ಮೂಲಕ ಕಾಟಾಚಾರಕ್ಕೆ ಧ್ವಜಾರೋಹಣ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ.

ನೂರಾರು ಮಕ್ಕಳಿಗೆ ಶಿಕ್ಷಣ ಮತ್ತು ಆದರ್ಶ ನೀಡುವ ಶಿಕ್ಷಕ ಕಾಲಿಗೆ ಶೂ ಧರಿಸಿ ರಾಷ್ಟ್ರ ಧ್ವಜಾರೋಹಣ ಮಾಡಿದ ಮುಖ್ಯಗುರುಗಳಾದ ಮಲ್ಲನಗೌಡ ಪಾಟೀಲ್ ಅಮಾನತುಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ.

ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವ ಕೂಡ ಒಂದು ಹಬ್ಬವಾಗಿದೆ ಅದರಂತೆ ಬೇಜವಾಬ್ದಾರಿ ತೋರಿದ ಮುಖ್ಯಶಿಕ್ಷಕನ ಫೋಟೋಗಳು ವೈರಲ್ ಆಗಿದ್ದು ದೇಶಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಮಕ್ಕಳಿಗೆ ಸರಿಯಾದ ದಾರಿ ತೋರಿಸುವ ಶಿಕ್ಷಕರೇ ಇಂತಹ ಕೆಲಸ ಮಾಡಿದರೆ ದೇಶದ ಭವಿಷ್ಯದ ಬುನಾದಿಯಲ್ಲಿ ಮಕ್ಕಳು ಏನನ್ನು ಕಲಿಯುತ್ತಾರೆ ಅನ್ನೋದು ಯಕ್ಷಪ್ರಶ್ನೇಯಾಗಿದೆ.

ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವ ಮೂಲಕ ಮುಂದೆಯೂ ಕೂಡ ಯಾವುದೇ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಶಿಕ್ಷಣ ಪ್ರೇಮಿಗಳ ಮತ್ತು ಜನಸಾಮಾನ್ಯರ ಒತ್ತಾಯವಾಗಿದೆ.

Related