ಅಂಜಲಿ ಕುಟುಂಬ ಭೇಟಿಯಾದ ಸಂತೋಷ್ ಲಾಡ್

ಅಂಜಲಿ ಕುಟುಂಬ ಭೇಟಿಯಾದ ಸಂತೋಷ್ ಲಾಡ್

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಇತ್ತೀಚಿಗಷ್ಟೇ ಪ್ರೀತಿ ನಿರಾಕರಿಸಿದ್ದಕ್ಕೆ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವ ಎಂಬ ಯುವಕ ಹಾಡುವಾಗಲೇ ಕೊಲೆಗೈದು ಪರರಾಗಿರುವ ಘಟನೆಗೆ ಸಂಬಂಧಿಸಿದಂತೆ ಇಂದು ಅಂಜಲಿಯವರ ಕುಟುಂಬಕ್ಕೆ ಕಾರ್ಮಿಕ ಸಚಿವರಾಗಿರುವಂತಹ ಸಂತೋಷ್ ಲಾಡ್ ಅವರು ಭೇಟಿ ಮಾಡಿ ಮೃತ ಅಂಜಲಿಯವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಂಜಲಿ ಅವರ ಕುಟುಂಬಕ್ಕೆ ಖಂಡಿತವಾಗಿಯೂ ನ್ಯಾಯ ಕೊಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಬ್ರೇಕಿಂಗ್ ನ್ಯೂಸ್; ಕೆಎಸ್ ಆರ್ ಟಿಸಿ ಬಸ್ಸು ಭೀಕರ ಅಪಘಾತ

ಬೆಳೆದ ಮಗಳನ್ನು ಕಳೆದುಕೊಂಡ ಅವರ ನೋವು ಕಂಡು ನಿಜಕ್ಕೂ ಬೇಸರವಾಯಿತು. ಅಂಜಲಿ ಕುಟುಂಬಕ್ಕೆ ವೈಯುಕ್ತಿಕವಾಗಿ 2 ಲಕ್ಷ ರೂಪಾಯಿಗಳ ಸಹಾಯ ಮಾಡಿದ್ದೇನೆ. ಅಂಜಲಿ ಸಾವಿಗೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದರು.

ಇನ್ನು ಅಂಜಲಿ ಅವರ ಅಜ್ಜಿ ಗಂಗಮ್ಮ ಮತ್ತು ಸಹೋದರಿಯರಿಗೆ ಧೈರ್ಯ ಹೇಳಿದ ಲಾಡ್, ಸಂತೋಷ್ ಲಾಡ್ ಫೌಂಡೇಷನ್ ನಿಂದ ರೂ. 2 ಲಕ್ಷ ಚೆಕ್ ನೀಡಿದರು.

https://twitter.com/explore?ref_src=twsrc%5Etfw%7Ctwcamp%5Etweetembed%7Ctwterm%5E1791721607238389933%7Ctwgr%5E5d3e5c0f05e02023dd814a2c0e013ae42a90f654%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2024%2FMay%2F18%2Fminister-santosh-lad-financial-assistance-to-anjalis-family

Related