ಜಮೀನ್ದಾರಿ ಪದ್ಧತಿಗೆ ಹುನ್ನಾರ

ಜಮೀನ್ದಾರಿ ಪದ್ಧತಿಗೆ ಹುನ್ನಾರ

ಲಿಂಗಸುಗೂರು: ಸರ್ಕಾರವು ಜಮೀನ್ದಾರಿ ಹಾಗೂ ಜಾಗೀರದಾರ ಪದ್ಧತಿಯನ್ನು ಜಾರಿಗೆ ತರುವ ವ್ಯವಸ್ಥಿತ ಹುನ್ನಾರ ನಡೆಸಿದೆ ಎಂದು ಕರ್ನಾಟಕ ಮಜ್ದೂರು ಸಂಘದ ರಾಜ್ಯಾಧ್ಯಕ್ಷ  ರಾಜು ಎಸ್ ಮನ್ನಿಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಮಹಾಮಾರಿಯಿಂದ ರಾಜ್ಯದ ಜನ ಹಾಗೂ ರೈತಾಪಿ ಕಾರ್ಮಿಕ ವರ್ಗ ಸಂಕಷ್ಟ ಎದುರಿಸುತ್ತಿದ್ದಾರೆ. ಒಂದು ಕಡೆ ಕೊರೋನಾ ಮತ್ತೊಂದು ಕಡೆ ಉದ್ಯೋಗವಿಲ್ಲದೇ ಬಡ ರೈತ ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕಾರ್ಮಿಕರಿಗಾಗಿ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ.

ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಸಣ್ಣ ರೈತರನ್ನು ಒಕ್ಕಲೆಬ್ಬಿಸಿ ಕಾರ್ಯಕ್ಕೆ ಪರೋಕ್ಷವಾಗಿ ರಾಜ್ಯ ಸರ್ಕಾರ ಬಂಡವಾಳ ಶಾಹಿಗಳಿಗೆ ಕುಮ್ಮಕ್ಕು ನೀಡಿ ಕೃಷಿ ವಿನಾಶಕ್ಕೆ ನಾಂದಿಹಾಡುತ್ತಿದೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದಾಗಿ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲ್ಲಿದ್ದಾರೆ. ಇದರಿಂದಾಗಿ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ.

Related