ಹಳದಿ ಕಲ್ಲಂಗಡಿಯ ಕಮಾಲ್

ಹಳದಿ ಕಲ್ಲಂಗಡಿಯ ಕಮಾಲ್

ಕಲಬುರಗಿ : ಕಲ್ಲಂಗಡಿ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಕೆಂಪು ಕಲಂಗಡಿ ಎಂದರೆ ಬಾಯಲ್ಲಿ ನೀರೂ ತರಿಸುತ್ತದೆ. ಆದರೆ ಕಲ್ಲಂಗಡಿ ಹಣ್ಣು ಹಳದಿ ಬಣ್ಣದ್ದಾಗಿದ್ದರೆ ಹೇಗಿರುತ್ತದೆ. ಹೌದು ಇಲ್ಲೊಬ್ಬ ರೈತ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಬೆಳೆದು ರಾಜ್ಯದ ಮೊದಲ ರೈತ ಎನಿಸಿಕೊಂಡಿದ್ದಾನೆ.

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಯುವ ರೈತ ಬಸವರಾಜ್ ಹಳದಿ ಕಲ್ಲಂಗಡಿ ಬೆಳೆದು ಜಿಲ್ಲೆಗೆ ಮಾದರಿ ರೈತನಾಗಿದ್ದಾನೆ. ಜರ್ಮನ್‌ನಿಂದ ಹಳದಿ ಕಲ್ಲಂಗಡಿ ಹಣ್ಣಿನ ಬೀಜ ತರಿಸಿ ತನ್ನ 2 ಎಕರೆ ಜಮೀನಿನಲ್ಲಿ 33 ಕ್ವಿಂಟಲ್ ಕಲ್ಲಂಗಡಿ ಬೆಳೆದು ಬಸವರಾಜ್ ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡು ತುಂಬಾ ಹಣಗಳಿಸುತ್ತಿದ್ದಾನೆ.

ರಾಜ್ಯದಲ್ಲಿಯೇ ಹಳದಿ ಕಲ್ಲಂಗಡಿ ಬೆಳೆದ ಪ್ರಥಮ ರೈತನೆಂಬ ಹೆಗ್ಗಳಿಕೆಗೆ ಈತ ಪಾತ್ರನಾಗಿದ್ದಾನೆ. ಈಗಾಗಲೇ ಹಣ್ಣು ಮಾರುಕಟ್ಟೆ ಪ್ರವೇಶಿಸಿದ್ದು, ಜನರು ಕೂಡ ಖರೀದಿಸುತ್ತಿದ್ದಾರೆ. ಇದರಿಂದ ರೈತ ಬಸವರಾಜುಗೆ ಸಂತೋಷ ಆಗಿದೆ. ಈ ಹೊಸ ಅವಿಷ್ಕಾರದಿಂದ ಬೇರೊಬ್ಬ ರೈತರಿಗೆ ಮಾದರಿಯಾಗಿದ್ದಾನೆ.

 

Related