ವನ ಆರಾಧನೆ: ಭಕ್ತಿಯಲ್ಲಿ ಮಿಂದೆದ್ದ ಜನರು

  • In State
  • February 21, 2020
  • 415 Views
ವನ ಆರಾಧನೆ: ಭಕ್ತಿಯಲ್ಲಿ ಮಿಂದೆದ್ದ ಜನರು

ಹುಬ್ಬಳ್ಳಿ, ಫೆ. 21: ಮಹಾಶಿವರಾತ್ರಿ ಹಬ್ಬದ ನಿಮಿತ್ಯ ನಗರದ ಬಹುತೇಕ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಇನ್ನೂ ಕೇಲವು ಕಡೆ ಅಹೋರಾತ್ರಿ ಜಾಗರಣೆ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆಯಿಂದಲೇ ನಗರದ ಸಿದ್ಧಾರೂಢ ಮಠ, ಮೂರು ಸಾವಿರ ಮಠ, ಹೆಗ್ಗೆರಿಯ ಶಿವಪುರ ಕಾಲೋನಿ ಶಿವಮಂದಿರ, ಸ್ಟೇಶನ್ ರಸ್ತೆಯ ಈಶ್ವರ ದೇವಸ್ಥಾನ, ಉಣಕಲ್ ರಾಮಲಿಂಗೇಶ್ವರ ದೇವಸ್ಥಾನ, ಶಿರಡಿ ಸಾಯಿಬಾಬಾ ಮಂದಿರ, ದುರ್ಗಾದೇವಿ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನದಲ್ಲಿ ಭಕ್ತರು ಆಗಮಿಸಿ ಭಕ್ತಿ ಪೂರ್ವಕ ಪೂಜೆ ಸಲ್ಲಿಸುತ್ತಿರುವ ದೃಶ್ಯಗಳು ಕಂಡು ಬಂದವು.

ನಗರದ ವಿವಿಧೆಡೆ ಶಿವನಿಗೆ ಪೂಜೆ: ನಗರದ ಗೋಕುಲ ರಸ್ತೆಯ ಚಿನ್ಮಯ ಮಿಷನ್ ವತಿಯಿಂದ ಶಿವ ಮಂದಿರದಲ್ಲಿ ಬೆಳಗ್ಗೆ ಏಕಾದಶವಾರ ರುದ್ರಾಭಿಷೇಕ ಪೂಜೆ ಸಲ್ಲಿಸಿದ ನಂತರ ಅಭಿಷೇಕ, ಮಂಗಳಾರತಿ, ವಿವಿಧ ಭಜನಾ ಮಂಡಳಿಯಿAದ ಭಜನಾ ಕಾರ್ಯಕ್ರಮ ನಡೆಯುತ್ತಿವೆ. ಇಂದು ಸಂಜೆ ೬ರಿಂದ ೭ರ ವರೆಗೆ ರುದ್ರಾಭಿಷೇಕ, ದೇವಿ ವೃಂದ ಹಾಗೂ ಮಹಿಳಾ ಮಂಡಳಿಯಿAದ ಲಕ್ಷಾರ್ಚನೆ ನಡೆಯಲಿದೆ.

ವಿಶ್ವನಾಥ ಮಂದಿರ: ವಿಶ್ವೇಶ್ವರನಗರದ ಕಲ್ಯಾಣ ಮಂಟಪ ನ್ಯಾಸ್ ಟ್ರಸ್ಟ್ ವತಿಯಿಂದ ಅಧ್ಯಾಪಕ ನಗರದ ವಿಶ್ವನಾಥ ಮಂದಿರದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ಈಶ್ವರ ದೇವಸ್ಥಾನ: ಸ್ಟೇಶನ್ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲ್ಲೇ ಸಾರ್ವಜನಿಕರಿಂದ ರುದ್ರಾಭಿಷೇಕ, ಶಾಸ್ತ್ರೋಕ ಪೂಜೆ, ಅಲಂಕಾರ ಶಿವನಿಗೆ ನಡೆದವು. ಪ್ರತಿವರ್ಷದಂತೆ ಶಿವರಾತ್ರಿ ಅಂಗವಾಗಿ ಅಹೋರಾತ್ರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಜೆ ಸಾರ್ವಜನಿಕ ದರ್ಶನ ರಾತ್ರಿ 10 ರಿಂದ ಬೆಳಗಿನ ಜಾವದ ವರೆಗೆ ಯಾಮ ಪೂಜೆ ನಡೆಯುವುದ ದಾಂಡೇಲಿಯ ವಿದ್ವಾನ್ ದಯಾನಂದ ದಾನಗೇರಿ ಅವರಿಂದ ಸಂಗೀತ, ಭಜನೆ ನಡೆಯುವುದು. ಮಾ.7ರಂದು ಬೆಳಗ್ಗೆ 10ಕ್ಕೆ ಲಘುರುದ್ರಾಭಿಷೇಕ ಜರುಗುವುದು.

ಸಾಮೂಹಿಕ ಶಿವ ನಮಸ್ಕಾರ: ಯೋಗ ಸ್ಪರ್ಶ ಪ್ರತಿಷ್ಠಾನ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ಹುಬ್ಬಳ್ಳಿ ಶಾಖೆ ವತಿಯಿಂದ ಬೆಳಿಗ್ಗೆ ಸಿದ್ಧಾರೂಢ ಸ್ವಾಮಿಗಳ ಕೈಲಾಸ ಮಂಟಪದ ಆವರಣದಲ್ಲಿ ಸಾಮೂಹಿಕ ಶಿವ ನಮಸ್ಕಾರ ಮಾಡಲಾಯಿತು.

 

Related