ಎಸ್‌ಐಟಿ ತಂಡ ತನಿಖಾ ದಾರಿ ತಪ್ಪಿದೆ: ಜೆಡಿಎಸ್

ಎಸ್‌ಐಟಿ ತಂಡ ತನಿಖಾ ದಾರಿ ತಪ್ಪಿದೆ: ಜೆಡಿಎಸ್

ಬೆಂಗಳೂರು: ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ವ್ಯಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ರಾಜ್ಯ ಸರ್ಕಾರ ವಿಶೇಷ ತಂಡವನ್ನು ರಚಿಸಿ ವಿಚಾರಣೆ ನಡೆಸುತ್ತಿದೆ.

ಇನ್ನು ರಾಜ್ಯ ಸರ್ಕಾರ ಎಸ್ಐಟಿ ತಂಡಕ್ಕೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ವರ್ಗಾಯಿಸಿದ್ದು, ಎಸ್ಐಟಿ ತಂಡ ತನಿಖೆ ದಾರಿ ತಪ್ಪಿದೆ ಎಂದು ಜೆಡಿಎಸ್ ಪಕ್ಷ ಆರೋಪ ಮಾಡಿದ್ದು ಇಂದು ಗುರುವಾರ ಮೇ 09 ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿತು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ.ಕುಮಾರಸ್ವಾಮಿ ನೇತೃತ್ವದಲ್ಲಿನ ನಿಯೋಗ ರಾಜಭವನದಲ್ಲಿಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.  ಇದನ್ನೂ ಓದಿ: ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ

ಇನ್ನು ದೂರನ್ನು ದಾಖಲಿಸುವುದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಯ ಪ್ರಗತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಹೆಚ್. ಡಿ. ರೇವಣ್ಣ ವಿರುದ್ಧದ ಮಹಿಳೆ ಅಪಹರಣ ಪ್ರಕರಣದ ತನಿಖೆ ಕುರಿತು ಚಕಾರ ಎತ್ತಿದ ಕುಮಾರಸ್ವಾಮಿ, ಕಿಡ್ನಾಪ್ ಆಗಿರುವ ಮಹಿಳೆಯನ್ನು ರಕ್ಷಿಸಿದ ನಂತರ ಈವರೆಗೂ ನ್ಯಾಯಾಲಯಕ್ಕೆ ಏಕೆ ಹಾಜರುಪಡಿಸಿಲ್ಲ ಎಂದು ಪ್ರಶ್ನಿಸಿದರು.

Related