ಕೆ ಆರ್ ಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಕೆ ಆರ್ ಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಬೆಂಗಳೂರು: ವಿಶ್ವ ಪರಿಸರದ ದಿನದ ಅಂಗವಾಗಿ ಇಂದು ಕೆ ಆರ್ ಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ರೋವರ್ಸ್ ಅಂಡ್ ರೇಂಜರ್ಸ್ ಘಟಕದ  ವತಿದಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಂತಹ ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನ ಜಾಗೃತಿ ಜಾಥ ಕರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಇನ್ನು ಕಾಲೇಜಿ ವಿದ್ಯಾರ್ಥಿಗಳಿಂದ ಪರಿಸರದ ದಿನದ ಅಂಗವಾಗಿ ಕಾಲೇಜಿನ ಸುತ್ತಮುತ್ತ

ಇರುವ ಅಂಗಡಿ ಮುಂಗಟುಗಳಲ್ಲಿ ಕಸಗಳನ್ನು ವಿಂಗಡಿಸುವ ಬಗ್ಗೆ ಮನವಲಿ ಮನವರಿಕೆ ಮಾಡಿದರು.

ಮನೆ ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಹೇಗೆ ಸ್ವಚ್ಛವಾಗಿಡವೇಕೆಂದು ವಿದ್ಯಾರ್ಥಿಗಳ ಮೂಲಕ ಸಾರ್ವಜನಿಕರಿಗೆ ತಿಳಿಸಲಾಯಿತು.

ಇನ್ನು ಪ್ರತಿನಿತ್ಯ ಮನೆ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಒಣ ಕಸ ಮತ್ತು ಹಸಿ ಕಸವನ್ನು ನಾವು ಹೇಗೆ ಬೇರ್ಪಡಿಸಿ ಬಿಬಿಎಂಪಿ ಪೌರ ಕಾರ್ಮಿಕರಿಗೆ ನೀಡಬೇಕೆಂದು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳು ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ, ಐಕೆ ಎಸಿ ಕೋ ಆರ್ಡಿನೇಟರ್ ಡಾಕ್ಟರ್ ರೇಣುಕಾ ಜಾಂಬೋ, ಸ್ಕೌಟ್ಸ್ ಅಂಡ್ ಗೈಡ್ಸ್ ಕನ್ವೆನಸ್ ಕ್ಯಾಪ್ಟನ್ ರಾಘವೇಂದ್ರ ರಾವ್, ಡಾಕ್ಟರ್ ತಾರಾಮಣಿ  ಆರ್, ರೆಡ್ ಕ್ರಾಸ್ ಕನ್ವೇನರ್ ಅಶೋಕ್ ಕೆ.ಎನ್ , ಡಾಕ್ಟರ್ ಆಶಾ, ಸಿ.ಎನ್ ಹೊಂಬಾಳೆ, ಉಳಿದಂತೆ ಇತರ ಪ್ರಾಧ್ಯಾಪಕರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Related