ಸತತವಾಗಿ 7 ಬಾರಿ ಗೆದ್ದಿದ್ದೇನೆ: ಆರ್ ಅಶೋಕ

ಸತತವಾಗಿ 7 ಬಾರಿ ಗೆದ್ದಿದ್ದೇನೆ: ಆರ್ ಅಶೋಕ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕನನ್ನು ತೂಗಿ ಅಳೆದು ಹಿರಿಯ ನಾಯಕರಾದ ಆರ್ ಅಶೋಕರನ್ನು ಆಯ್ಕೆ ಮಾಡಿದೆ.

ನಗರದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದವರು, ಸೋಲು ಗೆಲುವು ಎನ್ನುವುದು ಸಾಮಾನ್ಯವಾಗಿ ನಾವು ಸ್ವೀಕರಿಸಬೇಕು. ರಾಜಕೀಯ ಎಂದರೆ ಬರಿ ಗೆಲ್ಲುವುದಿಲ್ಲ ಬರಿ ಸೋಲುವುದಲ್ಲ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದೇ ರಾಜಕೀಯ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಕನಕಪುರದಲ್ಲಿ ಚುನಾವಣೆ ಸೋತಿರುವವರನ್ನು ವಿಪಕ್ಷದ ನಾಯಕ ಮಾಡಲಾಗಿದೆ ಅಂತೆ ಕಾಂಗ್ರೆಸ್ ನಾಯಕರು ಮಾಡಿರುವ ಕಾಮೆಂಟ್ ಅನ್ನು ಮಾಧ್ಯಮದವರು ಅಶೋಕ ಅವರಿಗೆ ತಿಳಿಸಿದಾಗ, ಡಿಕೆ ಶಿವಕುಮಾರ್ ಅವರು ಕನಕಪುರದಲ್ಲಿ ಸೋತಿಲ್ಲವೇ? 2018ರಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲಿಲ್ಲವೇ? ಮುಖ್ಯಮಂತ್ರಿ ಚುನಾವಣೆಗಳಲ್ಲಿ 3-4 ಬಾರಿ ಸೋತಿದ್ದಾರೆ. ಆದರೆ ತಾನು ಬಿಜೆಪಿ ಪ್ರಬಲವಾಗಿರದ ಕನಕಪುರ ಕ್ಷೇತ್ರದಲ್ಲಿ ಕೇವಲ ವರಿಷ್ಠರ ಒತ್ತಾಯದ ಮೇರೆಗೆ ಸ್ಪರ್ಧಿಸಿ ಸೋತಿರುವುದಾಗಿ ಹೇಳಿದರು.

ಪದ್ಮನಾಭನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿರುವುನೆಂದ ಆಶೋಕ ಕಾಂಗ್ರೆಸ್ ನಾಯಕರ ಜೊತೆ ತಮ್ಮನ್ನು ಹೋಲಿಸುವುದು ಬೇಡ, ಅವರ ಮತ್ತ ತಮ್ಮ ಸಿದ್ಧಾಂತಗಳು ಬೇರೆ, ತಮ್ಮದು ದೇಶ ಮೊದಲೆನ್ನುವ ಸಿದ್ಧಾಂತವಾದರೆ ಅವರಿಗೆ ಸೋನಿಯ ಗಾಂಧಿ ಮೊದಲೆನ್ನುವ ಸಿದ್ಧಾಂತ, ತಾವು ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದಿರುವುದಾಗಿ ಹೇಳಿದರು.

Related