ನಮಗೆ 10 ಕೆಜಿ ಅಕ್ಕಿಯನ್ನೇ ಕೊಡಿ ಎಂದು ಸರ್ಕಾರಕ್ಕೆ ಮಹಿಳೆಯರ ಮನವಿ

ನಮಗೆ 10 ಕೆಜಿ ಅಕ್ಕಿಯನ್ನೇ ಕೊಡಿ ಎಂದು ಸರ್ಕಾರಕ್ಕೆ ಮಹಿಳೆಯರ ಮನವಿ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ 2023ನೇ ಸಾಲಿನ ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಈ ಐದು ಗ್ಯಾರಂಟಿಗಳಲ್ಲಿ ಮಹತ್ವದ ಗ್ಯಾರಂಟಿ ಯಾದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿರುವ ಸರಕಾರ ಚುನಾವಣೆಗು ಮೊದಲು ಪ್ರತಿ ತಿಂಗಳು 10 ಕೆಜಿ ಅಕ್ಕಿ ಉಚಿತ ಎಂದು ಹೇಳಿತ್ತು. ಆದರೆ ಕೇಂದ್ರದಲ್ಲಿ ಹೆಚ್ಚುವರಿ ಅಕ್ಕಿ ಸಿಗದ ಕಾರಣ 5 ಕೆಜಿ ಅಕ್ಕಿಯ ಬದಲು ಈಗ 5 ಕೆಜಿ ಅಕ್ಕಿಗೆ ಹಣ ನೀಡುತ್ತಿದ್ದಾರೆ. ಆದರೆ ರಾಜ್ಯದಲ್ಲಿರುವ ಜನತೆ ಹಣದ ಬದಲು ನಮಗೆ ಅಕ್ಕಿ ನೀಡಿ ಎಂದು ಮನವಿ ಮಾಡಿದ್ದಾರೆ.

ಹೌದು, ರಾಜ್ಯದ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ನಮಗೆ 5 ಕೆಜಿ ಅಕ್ಕಿ ಜೊತೆ ಇನ್ನೂ ಐದು ಕೆಜಿ ಅಕ್ಕಿಯನ್ನು ಕೊಟ್ಟರೆ ನಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ಮನವಿ ಸಲ್ಲಿಸಿದ್ದಾರೆ.

ನಮಗೆ ಹಣ ಬೇಡ ಅಕ್ಕಿಯೇ ಕೊಡಿ ಎಂದು ರಾಜ್ಯದ ಜನತೆ ಅಭಿಮತದಿಂದ ಮನವಿ ಮಾಡಿದೆ. ಈ ಬಗ್ಗೆ ಒಂದಲ್ಲ‌ ಎರಡು ಸರ್ವೆಗಳು ನಡೆದಿದ್ದು ಅಕ್ಕಿಗೆ ಡಿಮ್ಯಾಂಡ್ ಹೆಚ್ಚಿದೆ. ಆಹಾರ ಇಲಾಖೆಯ ಅಧಿಕಾರಿ, ಸಿಬ್ಬಂದಿಯಿಂದ ಒಂದು ಸರ್ವೆ. ಸಿಎಂ ಕಚೇರಿಯ ಮೂಲಕ ಎನ್ ಜಿ ಒ ಮೂಲಕ ಮತ್ತೊಂದು ಸರ್ವೆ ನಡೆಸಲಾಗಿತ್ತು. ಈ ಎರಡು ಸರ್ವೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮಂದಿ ಹಣ ಬೇಡ ಅಕ್ಕಿ ಕೊಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ದೊರೆಯುತ್ತಿಲ್ಲ. ಇದೇ ಕಾರಣಕ್ಕೆ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ. ಮತ್ತೂಂದೆಡೆ ಮಳೆ ಕೊರತೆಯಿಂದ ಭತ್ತದ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ತಾನೇ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ವರದಿಯನ್ನು ಬಿಡುಗಡೆಗೊಳಿಸಿಲ್ಲ. ಈ ಬಗ್ಗೆ ಮಹಿಳೆಯರು ನಮಗೆ ಹಣ ಬೇಡ ದಯವಿಟ್ಟು ಸರ್ಕಾರ ಅಕ್ಕಿ ಕೊಡಲಿ ಎಂದು ಮನವಿ ಮಾಡುತ್ತಿದ್ದಾರೆ.

 

Related