ಮೆಟ್ರೋದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಅಂದರ್

ಮೆಟ್ರೋದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಅಂದರ್

ಬೆಂಗಳೂರು: ಉದ್ಯಾನಿ ನಗರಿ ಬೆಂಗಳೂರಿನ ಜನ ದಿನನಿತ್ಯದ ಟ್ರಾಫಿಕ್ ಸಮಸ್ಯೆಯಿಂದ ಓಡಾಡಲು ಸಂಕಷ್ಟ ಪಡುತ್ತಾರೆ. ಇನ್ನು ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲೆಂದು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಪ್ರಾರಂಭವಾಗಿದ್ದು ಸಾವಿರಾರು ಜನ ಪ್ರತಿನಿತ್ಯ ಈ ಮೆಟ್ರೋ ಸಂಚಾರವನ್ನು ಬಳಸುತ್ತಾರೆ.

ನಮ್ಮ ಮೆಟ್ರೋ ಸಂಚಾರದಲ್ಲಿ ಪ್ರತಿನಿತ್ಯ ಸಾವಿರಾರು ಜನ ಓಡಾಡುವುದರಿಂದ ಜನಸಂದಣಿ ಸಾಮಾನ್ಯವಾಗಿ ಕಾಣುತ್ತದೆ. ಆದರೆ, ಈ ಜನಸಂದಣಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಕಾಮುಕನೊಬ್ಬನನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಒಂಟಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಬಂಧಿಸಿ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿ 30 ವರ್ಷ ವಯಸ್ಸಿನ ಲೋಕೇಶ್ ಆಚಾರ್ ನೆಲಮಂಗಲದ ನೇಕಾರರ ಕಾಲೋನಿ ನಿವಾಸಿಯಾಗಿದ್ದಾನೆ.

22 ವರ್ಷದ ಮಹಿಳೆ ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ನಿನ್ನೆ ಬೆಳಗ್ಗೆ(ಡಿ.7) ಸುಮಾರು 9.40 ಕ್ಕೆ ಪ್ರಯಾಣಿಸಿದ್ದಾರೆ. ಮಹಿಳೆ ಪ್ರತಿನಿತ್ಯ ರಾಜಾಜಿನಗರ ದಿಂದ ಎಂಜಿ ರೋಡ್ ವರೆಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಬೆಳಿಗ್ಗೆ ಜನಸಂದಣಿ ಇದ್ದಿದ್ದರಿಂದ ಇದನ್ನೆ ಬಂಡವಾಳ ಮಾಡಿಕೊಂಡ ಕಾಮುಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆಯನ್ನ ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ಕಿರುಕುಳ ನೀಡಿದ್ದಾನೆ.

ಹೆಚ್ಚಾಗಿ ಜನಸಂದಣಿ ಇರುವ ಸಮಯ ನೋಡಿಕೊಂಡು ಮೆಟ್ರೋ ಹತ್ತುವ ಸೈಕೋ. ಬೆಳಗ್ಗೆ, ಸಾಯಂಕಾಲ ಪ್ರಯಾಣಿಕರಿಂದ ಜನಸಂದಣಿ ಆಗಿರುವ ಮೆಟ್ರೋ ಹತ್ತುವ ಕಾಮುಕ ಮಹಿಳೆ, ಕಾಲೇಜು ಹುಡುಗಿಯರಿಗೆ ಹಿಂದೆ ಮುಂದೆ ನಿಂತು ತಳ್ಳಾಟ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ. ನಿನ್ನೆಯೂ ಹಾಗೆ ಮಾಡಿದ್ದಾನೆ. ಆದರೆ ಯುವತಿ ತಕ್ಷಣ ಕೂಗಿಕೊಂಡಿದ್ದಾಳೆ.

ಯುವತಿ ಕೂಗಿಕೊಳ್ತಿದ್ದಂತೆ ಇದರಿಂದ ಗಾಬರಿಗೊಂಡು ಆರೋಪಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೆಂಪೆಗೌಡ ಮೆಟ್ರೋ ನಿಲ್ದಾಣದಲ್ಲಿ ಇಳಿದು ಓಡುತ್ತಿರುವಾದ ಹಿಡಿದ ಭದ್ರತಾ ಸಿಬ್ಬಂದಿ. ಆರೋಪಿ ಎಸ್ಕಲೇಟರ್ ಬಳಸಿ ವೇಗವಾಗಿ ಮುಂದೆ ಹೋದಾಗ ಮಹಿಳಾ ಪ್ರಯಾಣಿಕರು ಹಿಡಿದುಕೊಳ್ಳುವಂತೆ ಕೂಗಿದ್ದಾರೆ. ಗಲಾಟೆ ಕೇಳಿಸಿಕೊಂಡ ಭದ್ರತಾ ಅಧಿಕಾರಿ ಪುಟ್ಟಮಾದಯ್ಯ ಹಾಗೂ ದಿವಾಕರ್ ತಕ್ಷಣ ಸ್ಥಳಕ್ಕೆ ಆಗಮಿಸಿ. ಲೋಕೇಶ್ ಆಚಾರ್ ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

 

Related