ಈ ವಾರವೇ ನೂರು ಕೋಟಿ ಗಳಿಸುತ್ತಾ ಕಾಟೇರ ಚಿತ್ರ?

ಈ ವಾರವೇ ನೂರು ಕೋಟಿ ಗಳಿಸುತ್ತಾ ಕಾಟೇರ ಚಿತ್ರ?

ಬೆಂಗಳೂರು: ಬಾಕ್ಸ್ ಆಫೀಸ್ ನಲ್ಲಿ ಕಾಟೇರನ ಅಬ್ಬರ ಜೋರಾಗಿದ್ದು, ನಟ ದರ್ಶನ್ ಅಭಿನಯಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹೌದು ಕಾಟೇರ ಚಿತ್ರ ರಾಜದಾದ್ಯಂತ ಡಿಸೆಂಬರ್ 29ರಂದು ತೆರೆಕಂಡಿದ್ದು ಈ ಚಿತ್ರವನ್ನು ಅಭಿಮಾನಿಗಳು ನೋಡಿ ಡಿ ಬಾಸ್ ನ ಹಾಡಿ ಹೊಗಳಿದ್ದಾರೆ. ಇನ್ನು ತೆರೆ ಮೇಲೆ ಡಿ ಬಾಸ್ ಗೆ ಜೊತೆಯಾಗಿ ಹಿರಿಯ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ನಟಿಸಿದ್ದು ಇವರ ನಟನೆಗೂ ಸಹ ಅಭಿಮಾನಿಗಳು ಪ್ರಸಂಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಕಾಟೇರ ಚಿತ್ರ ಬಹಳ ಸದ್ದು ಮಾಡಿದ್ದು ಕಾಟೇರ ಗಳಿಕೆಯತ್ತ ಮುನ್ನುಗುತ್ತಿದೆ.

ಹೌದು, 4ನೇ ದಿನವೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಒಟ್ಟಾರೆ ಗಳಿಕೆ 75 ಕೋಟಿ ರೂಪಾಯಿ ಆಗಿದೆ. ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಲು ಇನ್ನು ಬೇಕಿರುವುದು ಕೇವಲ 25 ಕೋಟಿ ರೂಪಾಯಿ ಮಾತ್ರ. ಈ ವಾರವೇ ಸಿನಿಮಾ ಅನಾಯಾಸವಾಗಿ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

 

Related