ಮತ್ತೆ ಕಮಲ ಸೇರ್ಪಡೆ ಆಗ್ತಾರಾ ಮಾಜಿ ಸಿಎಂ?

ಮತ್ತೆ ಕಮಲ ಸೇರ್ಪಡೆ ಆಗ್ತಾರಾ ಮಾಜಿ ಸಿಎಂ?

ದೆಹಲಿ: ರಾಜ್ಯ ರಾಜಕೀಯದಲ್ಲಿ ಲೋಕಸಮರ ಸಮೀಪಿಸುತ್ತಿದ್ದಂತೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಈ ಬಾರಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕನಿಷ್ಠ ಸೀಟುಗಳನ್ನು ಗೆಲ್ಲಬೇಕೆಂದು ಪಣತೊಟ್ಟಿವೆ. ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ನಡೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ.

ಹೌದು, ಕಾಂಗ್ರೆಸ್ ಪಕ್ಷದಲ್ಲಿ ಜಗದೀಶ್ ಶೆಟ್ಟರಿಗೆ ಎಳ್ಳಷ್ಟು ಬೆಲೆ ಇಲ್ಲ ಎಂದು ಆರ್ ಅಶೋಕ್ ಅವರು ಈಗಾಗಲೇ ಜಗದೀಶ್ ಶೆಟ್ಟರಿಗೆ ಪರೀಕ್ಷವಾಗಿ ಹೇಳಿದ್ದಾರೆ. ಇದರ ಬೆನ್ನೆಲೆ ಇದೀಗ ಜಗದೀಶ್ ಶೆಟ್ಟರ್ ಅವರು ಬಿಜೆಪಿಯತ್ತ ಮುಖ ಮಾಡುತ್ತಾರಾ ಎಂಬ ಮಾತುಕತೆ ರಾಜಕೀಯದಲ್ಲಿ ಗ್ರಾಸವಾಗಿ ಚರ್ಚೆಯಾಗುತ್ತಿದೆ.

ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಈಗಾಗಲೇ ದೆಹಲಿಗೆ ತೆರಳಿದ್ದು ಇಂದು ಜಗದೀಶ್ ಶೆಟ್ಟರ್ ಕೂಡ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.

ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಜಗದೀಶ್ ಶೆಟ್ಟರ್ ಮಹತ್ವದ ಮಾತುಕತೆ ನಡೆಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ರಾಜ್ಯದ ಪ್ರಮುಖ ಬಿಜೆಪಿ ನಾಯಕರು ದೆಹಲಿಯಲ್ಲಿರುವಾಗಲೇ ಜಗದೀಶ್ ಶೆಟ್ಟರ್ ರಾಷ್ಟ್ರ ರಾಜಧಾನಿಗೆ ತೆರಳಿರೋದು ಅಚ್ಚರಿಗೆ ಕಾರಣವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಜಗದೀಶ್ ಶೆಟ್ಟರ್ ಈ ನಡೆ ರಾಜ್ಯದಲ್ಲಿ ಕುತೂಹಲ ಕೆರಳಿಸಿದೆ. ಹಾಗಾದ್ರೆ ಜಗದೀಶ್ ಶೆಟ್ಟರ್ ಅವರು ಮತ್ತೆ ಕಮಲ ಪಡೆ ಸೇರುತ್ತಾರೆ ಎಂದು ಕಾದು ನೋಡಬೇಕಿದೆ.

Related