ದೊಡ್ಮನೆಗೆ ಹೋಗ್ತಾರಾ ನಟಿ ರಜನಿ ರಾಘವನ್?

ದೊಡ್ಮನೆಗೆ ಹೋಗ್ತಾರಾ ನಟಿ ರಜನಿ ರಾಘವನ್?

ಬೆಂಗಳೂರು: ಕನ್ನಡ ಭಾಷೆಯಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ರಿಯಾಲಿಟಿ ಶೋ ನಡೆಯುವುದೆಂದರೆ ಅದು ಬಿಗ್ ಬಾಸ್. ಹೌದು ಬಿಗ್ ಬಾಸ್ ಕೇವಲ ಇನ್ನೇನು ಎರಡು ದಿನಗಳಲ್ಲಿ ಗ್ರ್ಯಾಂಡ್ ಆಗಿ ಓಪನ್ ಆಗಲಿದೆ. ಕಳೆದ 9 ಸೀಸನ್ ನಲ್ಲೂ ಸಹ ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾ ಬಂದಿದ್ದಾರೆ. 10ನೇ ಸೀಸನ್ ನಲ್ಲೂ ಸಹ ನಟ ಸುದೀಪ ಅವರೇ ನಿರೂಪಣೆ ಮಾಡುತ್ತಿದ್ದಾರೆ.

ಇನ್ನು ಬಿಗ್ ಬಾಸ್ ಎಂದರೆ ಸಾಕು, ಬಿಗ್ ಬಾಸ್ ರಿಯಾಲಿಟಿ ಶೋಗೆ ಯಾರೆಲ್ಲಾ ಬರುತ್ತಾರೆ ಎಂಬುದು ಕುತೂಹಲದ ಸಂಗತಿ ಆಗಿರುತ್ತದೆ.

ಇನ್ನೆರಡು ದಿನಗಳು ಉರುಳಿದರೆ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಎಂದು ಗೊತ್ತಾಗುತ್ತದೆ. ಅಷ್ಟರಲ್ಲಿ ಹಲವಾರು ಹೆಸರುಗಳು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಲಿಸ್ಟ್ ನಲ್ಲಿ ಕಾಣಿಸಿಕೊಂಡವು. ಇದೀಗ ಒಬ್ಬೊಬ್ಬರೇ ತಾವು ದೊಡ್ಮನೆಗೆ ಕಾಲಿಡುತ್ತಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂದು ಸುದ್ದಿ ಆಗಿತ್ತು. ಅದನ್ನು ಅವರು ನಿರಾಕರಿಸಿದ್ದಾರೆ.

ನನಗೆ ಮಾಡುವುದಕ್ಕೆ ಬೇರೆ ಕೆಲಸಗಳಿವೆ. ನಾನೊಂದು ಕನಸಿನ ಯೋಜನೆಯನ್ನು ಬೆನ್ನತ್ತಿದ್ದೇನೆ. ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎನ್ನುವುದು ಸುಳ್ಳು. ನಾನು ಹೋಗುತ್ತಿಲ್ಲ. ನನ್ನ ಕನಸಿಗೆ ನೀವು ಜೊತೆಯಾಗಿ. ಈ ಕುರಿತು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ರಂಜನಿ ಸ್ಪಷ್ಟಪಡಿಸಿದ್ದಾರೆ.

 

 

Related