ಬಿಜೆಪಿಗೆ ಮತ್ತೆ ಶೆಟ್ಟರ್ ಸೇರ್ಪಡೆಯಾಗಿದ್ಯಾಕೆ?

ಬಿಜೆಪಿಗೆ ಮತ್ತೆ ಶೆಟ್ಟರ್ ಸೇರ್ಪಡೆಯಾಗಿದ್ಯಾಕೆ?

ನವದೆಹಲಿ: ರಾಜ್ಯದಲ್ಲಿ ಬಿಜೆಪಿ ನಾಯಕರುಗಳು ನನಗೆ ಮತ್ತೆ ಬಿಜೆಪಿ ಪಕ್ಷಕ್ಕೆ ಮರಳಿ ಬರಬೇಕೆಂದು ಹಲವ ಬಾರಿ ತಿಳಿಸಿದರು. ಲೋಕಸಭಾ ಚುನಾವಣೆಗೆ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಮತ್ತೆ ನರೇಂದ್ರ ಮೋದಿಯನ್ನು ಅಧಿಕಾರಕ್ಕೆ ತರುವ ಕೆಲಸವನ್ನು ನಾವು ಮಾಡಬೇಕೆಂದು ನಮಗೆ ಮಾಹಿತಿ ನೀಡಿದ್ದರು ಆದ್ದರಿಂದ ನಾನು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.

ದೆಹಲಿಯಲ್ಲಿಂದು ಬಿಜೆಪಿ ಪಕ್ಷ ಮರು ಸೇರ್ಪಡೆಯಾದ ನಂತರ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ನಾನು ಮತ್ತೆ ಬಿಜೆಪಿಗೆ ಮರಳಬೇಕೆಂದು ಪಕ್ಷದ ಎಲ್ಲರ ಆಶಯವಾಗಿತ್ತು ಹಾಗಾಗಿ ನಾನು ಮತ್ತೆ ಬಿಜೆಪಿ ಪಕ್ಷಕ್ಕೆ ಮರಳಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಸಭಾಪತಿಗಳಾದ ಬಸವರಾಜ್ ಹೊರಟ್ಟಿ  ಅವರಿಗೆ ಕಳುಹಿಸಿದ್ದೇನೆ. ದೇಶದ ರಕ್ಷಣೆ, ದೇಶದ ಒಗ್ಗಡೂವಿಕೆಗಾಗಿ 10 ವರ್ಷದಿಂದ ಪ್ರಧಾನಿಗಳಾದ ಮೋದಿ ಕೆಲಸ ಮಾಡಿದ್ದಾರೆ. ಅವರ ಮರು ಆಯ್ಕೆಯಾಗಬೇಕು. ಈ ಹಿನ್ನೆಲೆ ಕಾಂಗ್ರೆಸ್ ತೊರೆಯುತ್ತಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಅದೇ ರೀತಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಇ-ಮೇಲ್ ಮೂಲಕ ಕಳುಹಿಸಿದ್ದೇನೆ. ನೇರವಾಗಿ ಪತ್ರ ಕಳುಹಿಸಲಾಗುತ್ತದೆ ಎಂದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾನು ಮರಳಿ ಬರಬೇಕು ಅನ್ನೋದು ಅವರ ಆಶಯ ಆಗಿತ್ತು. ಹಾಗಾಗಿ ಬಿಜೆಪಿಗೆ ಮರಳಿ ಬಂದಿದ್ದೇನೆ.

 

Related