ಸೀಸನ್ 10ರ ಬಿಗ್ ಬಾಸ್ ವಿನ್ನರ್ ಯಾರು?

ಸೀಸನ್ 10ರ ಬಿಗ್ ಬಾಸ್ ವಿನ್ನರ್ ಯಾರು?

ಬೆಂಗಳೂರು: ಬಿಗ್ ಬಾಸ್ ಸೀಸನ್ 10 ರ ಸಂಚಿಕೆ ಕೊನೆ ಹಂತದಲ್ಲಿದ್ದು ಇಂದು ಮತ್ತೆ ನಾಳೆ ಫಿನಾಲೆ ನಡೆಯುತ್ತಿದೆ. ಈ ಬಿಗ್ ಬಾಸ್ ಸೀಸನ್ 10ರಲ್ಲಿ ಯಾರ ಪಾಲಿಗೆ ಒಲಿದು ಬರಲಿದೆ ವಿನ್ನರ್ ಪಟ್ಟ ಎಂದು ಎಲ್ಲಾ ಬಿಗ್ ಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಹೌದು, ಬಿಗ್ ಬಾಸ್ ಸೀಸನ್ 10 ಈಗಾಗಲೇ ಫಿನಾಲೆಯ ಹಂತವನ್ನು ತಲುಪಿದ್ದು ಕಿಚ್ಚ ಸುದೀಪ್ ಅವರು ಇಂದು ಯಾರ ಕೈ ಎತ್ತಲಿದ್ದಾರೆ ಎಂದು ಎಲ್ಲಾ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು ದೊಡ್ಮನೆಯಲ್ಲಿ ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ಕಾರ್ತಿಕ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ವಿನಯ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ, ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಅಂತಿಮವಾಗಿ ಬಿಗ್ ಬಾಸ್ ಪಟ್ಟ ಯಾರ ಪಾಲಾಗಲಿದೆ ಎನ್ನುವುದು ನಾಳೆ ಗೊತ್ತಾಗಲಿದೆ.

 

 

 

Related