ರಾಜ್ಯದಲ್ಲಿ ವರುಣರ ಅಬ್ಬರ : ಜನರಲ್ಲಿ ಆತಂಕ

ರಾಜ್ಯದಲ್ಲಿ ವರುಣರ ಅಬ್ಬರ : ಜನರಲ್ಲಿ ಆತಂಕ

ಬಾಗಲಕೋಟೆ : ನರೆಯ ಮಹಾರಾಷ್ಟ್ರದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ, ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಉಕ್ಕಿ ಹಿರಿಯುತ್ತಿವೆ. ಈ ಹಿನ್ನಲೆಯಲ್ಲಿ ಮೂರು ನದಿಗಳ ಪಾತ್ರದ ಜನರಲ್ಲಿ ಇದೀಗ ಭೀತಿ ಉಂಟಾಗಿದ್ದು, ಅನೇಕ ಗ್ರಾಮಗಳು ಮುಳುಗಡೆಯ ಭೀತಿಯನ್ನು ಎದುರಿಸುತ್ತಿವೆ.

ಮತ್ತೊಂದೆಡೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಅಪಾರ ಪ್ರಮಾಣದ ನೀರು ಹರಿ ಬಿಟ್ಟ ಕಾರಣ, ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಇದೇ ಕಾರಣದಿಂದ ನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಮಲಪ್ರಭಾ ನದಿ ಪಾತ್ರದಲ್ಲಿ 24 ಸಾವಿರ ಕ್ಯೂಸೆಕ್ ನೀರು ನವಿಲು ತೀರ್ಥ ಜಲಾಶಯಕ್ಕೆ ಹರಿಬಿಟ್ಟ ಪರಿಣಾಮ ಬಾದಾಮಿ ತಾಲೂಕಿನ 30ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಭೀತಿ ಎದುರಿಸುವಂತಾಗಿದೆ.

Related