ತಂಬಾಕು ಉತ್ಪನ್ನಗಳ ಅಂಗಡಿ ಮೇಲೆ ದಾಳಿ ಮಾಲೀಕರಿಗೆ ಎಚ್ಚರಿಕೆ!

ತಂಬಾಕು ಉತ್ಪನ್ನಗಳ  ಅಂಗಡಿ ಮೇಲೆ ದಾಳಿ ಮಾಲೀಕರಿಗೆ ಎಚ್ಚರಿಕೆ!

ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಮಂಗಳವಾರ ದಿಡೀರನೆ ದಾಳಿ ನಡಿಸಿದ ರಾಷ್ಟೀಯ ಬಾಲಕಾರ್ಮಿಕ ಯೋಜನೆ ಕ್ಷೇತ್ರಾಧಿಕಾರಿ, ಪಿ.ಎಂ ಈಶ್ವರಯ್ಯ, ಪೊಲೀಸ್ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬಳ್ಳಾರಿಯ ಎಸ್. ಭೋಜರಾಜ ಸಿಬ್ಬಂದಿ ವಿವಿಧ ಇಲಾಖೆಯ ಸಹಯೋಗದಲ್ಲಿ ಕೊಟ್ಟೂರು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಅಂಗಡಿ ಉದ್ದಿಮೆಗಳ ತಪಾಸಣೆ ಮಾಡಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ 1986 ಕಾಯ್ದೆ ಮತ್ತು ಕೋಟ್ಟಾಕಾಯ್ದೆ 2003 ರ ಸೆಕ್ಷನ್ -4ರ ಉಲ್ಲಂಘನೆಯ ಅಡಿಯಲ್ಲಿ ವಿವಿಧ ಅಂಗಡಿಗಳಲ್ಲಿ ಪರಿಶೀಲಿನೆ ನೆಡೆಸಿ 15 ಕೇಸು ದಾಖಲಿಸಿ ಸ್ಥಳದಲ್ಲಿಯೇ 2700 ದಂಡವನ್ನು ವಿಧಿಸಲಾಯಿತು. ಸೆಕ್ಷನ್ -6ಂಉಲ್ಲಂಘನೆ ಅಡಿಯಲ್ಲಿ 3 ಕೇಸು ದಾಖಲಿಸಿ ಸ್ಥಳದಲ್ಲಿಯೇ 600 ದಂಡವನ್ನು ವಿಧಿಸಲಾಯಿತು ಒಟ್ಟು 18 ಕೇಸುದಾಖಲಿಸಿ 3300 ದಂಡವನ್ನು ವಿಧಿಸಲಾಯಿತು .ಮಾಲಿಕರಿಗೆ ಬಾಲಕಾರ್ಮಿಕ ಕಾಯ್ದೆ ಕುರಿತು ಜಾಗೃತಿ ಮೂಡಿಸಿ ಸ್ಥಳದಲ್ಲಿ ದಂಡ ವಿಧಿಸಿದರು.

ಲೇಬರ್ ಲೈಸೆನ್ಸ್, ಫುಡ್ ಲೈಸನ್ಸ್, ಪಟ್ಟಣ ಪಂಚಾಯಿತಿ ಲೈಸನ್ಸ್ ತಪಾಸಣೆ ಮಾಡಿದರು. ಅಂಗಡಿಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಗಮನಕ್ಕೆ ಬಂತು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ನಾವು ಬೇಟಿ ನೀಡಿದ ಸಂದರ್ಭದಲ್ಲಿ ಈ ರೀತಿಯಲ್ಲಿ ಕಂಡು ಬಂದರೆ ಅಂತಹ ಅಂಗಡಿಗಳ ಲೈಸನ್ಸ್ ರದ್ದು ಮಾಡಿ ಸೀಜ್ ಮಾಡಲಾಗುತ್ತದೆ ಎಂದು ಖಡಕ್ ಅಗಿ ಹೇಳಿದರು.

ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಎ.ಎಸ್.ಐ ಅಬ್ಬಾಸ್, ಆರೋಗ್ಯ ಕಿರಿಯ ಸಂಯೋಜಕಿ ಕೆ. ಅನುಷಾ, ಹೇಮನ ಗೌಡ ಇದ್ದರು.

Related