ಇಂದು ದೆಹಲಿಯಲ್ಲಿ ವೀರ್‌ ಬಾಲ್‌ ದಿವಸ್‌ ಆಚರಣೆ

ಇಂದು ದೆಹಲಿಯಲ್ಲಿ ವೀರ್‌ ಬಾಲ್‌ ದಿವಸ್‌ ಆಚರಣೆ

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯಿಂದ ಅದ್ಧೂರಿ ‘ವೀರ್‌ ಬಾಲ್‌ ದಿವಸ್‌’ ಆಚರಣೆ. ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಅದ್ಧೂರಿಯಾಗಿ ವೀರ್‌ ಬಾಲ್‌ ದಿವಸ್‌ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಸೇರಿದಂತೆ ಇತರ ಸಚಿವರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಯವರು ಮಾರ್ಚ್-ಪಾಸ್ಟ್ ಅನ್ನು ಸಹ ಧ್ವಜಾರೋಹಣ ಮಾಡಲಿದ್ದಾರೆ.

ಹೌದು, ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಭಾರತ್ ಮಂಟಪದಲ್ಲಿ ವೀರ್ ಬಾಲ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೆಹಲಿಯಲ್ಲಿ ಯುವಕರ ಮಾರ್ಚ್-ಪಾಸ್ಟ್​​​ಗೆ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ವೀರ್ ಬಲ್ ದಿವಸ್ ಭಾರತೀಯತೆಯ ರಕ್ಷಣೆ ಹಂತದ ಸಂಕೇತವಾಗಿದೆ ಎಂದು ಹೇಳಿದರು. ಈ ವರ್ಷ ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ ಮತ್ತು ಗ್ರೀಸ್ ಕೂಡ ‘ವೀರ್ ಬಾಲ್ ದಿವಸ್’ ಕಾರ್ಯಕ್ರಮಗಳನ್ನು ಆಯೋಜಿಸಿವೆ ಎಂದು ಹೇಳಿದರು.

ಇಂದು ನಾವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಿರುವಾಗ ಜಗತ್ತು ನಮ್ಮ ನೋಡುತ್ತಿದೆ. ಹಾಗೂ ನಮ್ಮನ್ನು ಅನುಸರಿಸುತ್ತಿದ್ದಾರೆ. ಭಾರತ ಈಗ ತುಂಬಾ ವಿಭಿನ್ನವಾಗಿದೆ. ಇಂದಿನ ಭಾರತವು ತನ್ನದೇ ಆದ ಜನರು, ಸಾಮರ್ಥ್ಯ ಮತ್ತು ಸ್ಫೂರ್ತಿಗಳಲ್ಲಿ ವಿಶ್ವಾಸವನ್ನು ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್‌ಜಾದಾಸ್ ಬಾಬಾ ಜೊರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಹುತಾತ್ಮರ ನೆನಪಿಗಾಗಿ ಡಿಸೆಂಬರ್ 26ನ್ನು ‘ವೀರ್ ಬಾಲ್ ದಿವಸ್’ ಎಂದು ಆಚರಿಸಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ಮೋದಿ ಘೋಷಿಸಿದರು.

Related