ಉಬುಂಟು: ಅಂತರಾಷ್ಟ್ರೀಯ ಮಹಿಳಾ ವಾಣಿಜ್ಯೋದ್ಯಮ ದಿನ ಆಚರಣೆ

ಉಬುಂಟು: ಅಂತರಾಷ್ಟ್ರೀಯ ಮಹಿಳಾ ವಾಣಿಜ್ಯೋದ್ಯಮ ದಿನ ಆಚರಣೆ

ಬೆಂಗಳೂರು: ಉಬುಂಟು ಮಹಿಳಾ ಉದ್ಯಮಿಗಳ ಮಹಾಒಕ್ಕೂಟದ ವತಿಯಿಂದ ‘ಒಗ್ಗಟ್ಟಾಗಿ ಬೆಳೆಯೋಣ’ ಎಂಬ ಧ್ಯೇಯದೊಂದಿಗೆ ಅಂತರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನವನ್ನು ಅರಮನೆ ರಸ್ತೆಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.

ಬೃಹತ್ ಕೈಗಾರಿಕಾ ಸಚಿವರಾದ ಎಂ ಬಿ ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪನೆಗೆ ಸರ್ಕಾರದ ವತಿಯಿಂದ ನೀಡಲಾಗುವ ಎಲ್ಲಾ ಸವಲತ್ತುಗಳನ್ನು ಮತ್ತು ಅಗತ್ಯವಾದ ಬೆಂಬಲವನ್ನು ಮಹಿಳಾ ಸಬಲೀಕರಣಕ್ಕೆ ನೀಡಲಾಗುವುದು ಎಂದು ವಾಗ್ದಾನ ಮಾಡಿದರು.

ಉಬುಂಟು ಸಂಸ್ಥಾಪಕ ಅಧ್ಯಕ್ಷರಾದ ಕೆ ರತ್ನ ಪ್ರಭ, ಸಂಸ್ಥೆಯ ಕಾರ್ಯದರ್ಶಿಗಳಾದ ಜ್ಯೋತಿ ಬಾಲಕೃಷ್ಣನ್, ಸಂಘದ ಉಪಾಧ್ಯಕ್ಷರಾದ ಉಮಾ ರೆಡ್ಡಿ ಮತ್ತು ಇತರೆ ಸದಸ್ಯರು ಮತ್ತು ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು.

Related