ಒಂದೇ ಕಣ್ಣು ಎರಡು ಪಾಪೆ ವಿಚಿತ್ರ ಮೇಕೆ ಮರಿ

ಒಂದೇ ಕಣ್ಣು ಎರಡು ಪಾಪೆ ವಿಚಿತ್ರ ಮೇಕೆ ಮರಿ

ಲಖನೌ : ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನವಜಾತ ಮೇಕೆ ಮರಿಯು ತನ್ನ ವಿಚಿತ್ರ ಹುಟ್ಟಿನಿಂದಾಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಸುತ್ತಮುಯತ್ತಲ್ಲಿನ ಹಳ್ಳಿಗರು ಮೇಕೆ ಮರಿಯನ್ನು ಕಣ್ತುಂಬಿಕೊಳ್ಳಲು ಗುಂಪು ಗುಂಪಾಗಿ ನೋಡುತ್ತಿದರು.

ಮೇಕೆಯು ಎರಡು ದಿನಗಳ ಹಿಂದೆ ಜನ್ಮ ನೀಡಿದ ಎರಡು ಮರಿಗಳಲ್ಲಿ ಒಂದು ಮರಿ ವಿಚಿತ್ರವಾಗಿ ಜನಿಸಿದ್ದು, ಬಿಜ್ನೋರ್‌ನ ನೂರ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೊರಾಹತ್ ಗ್ರಾಮದ ನಿವಾಸಿ ಮಸಿಯಾ ಮನೆಯಲ್ಲಿ ಮೇಕೆ ಜನಿಸಿದೆ.

ಮೇಕೆ ಮರಿಯ ಹಣೆಯ ಮೇಲೆ ಒಂದೇ ಒಂದು ದೊಡ್ಡ ಕಣ್ಣಿದ್ದು, ಅದರಲ್ಲಿ ಎರಡು ಕಣ್ಣಿನ ಪಾಪೆಗಳಿವೆ. ಸಾಮಾನ್ಯ ಮುಖದ ರಚನೆಗಿಂತ ಮೇಕೆ ಮರಿಯ ಮುಖ ಸಂಪೂರ್ಣ ವಿಚಿತ್ರವಾಗಿದ್ದು, ನಾಲಿಗೆಯು ಸಹ ತಿರುಚಿಕೊಂಡಂತಿದೆ.

ಹಣೆಯಲ್ಲಿ ಮೂರನೇ ಕಣ್ಣು ಇರುವುದರಿಂದ ಶಿವನ ಪ್ರತಿರೂಪ ಎನ್ನುತ್ತಿದ್ದಾರೆ. ಕೆಲವು ಮಂದಿ ಮೇಕೆ ಮರಿಗೆ ಪೂಜೆಯನ್ನು ಸಲ್ಲಿಸಿದ್ದಾರೆ.

ಈ ವೇಳೆ ಸ್ಥಳೀಯ ಪಶುವೈದ್ಯಾಧಿಕಾರಿ ಪುಷ್ಕರ್ ರಥಿ ಮಾತನಾಡಿ, ಮೇಕೆ ಮರಿಯ ಜನ್ಮ ಅಸಮಾನ್ಯವಾಗಿದ್ದು, ಇಂತಹ ಮರಿಗಳು ಹೆಚ್ಚು ದಿನ ಬದುಕುವುದಿಲ್ಲ. ಇದೊಂದು ವಿಚಿತ್ರವಷ್ಟೇ, ದೇವರ ಆಶೀರ್ವಾದ ಎಂದು ಭಾವಿಸಬೇಡಿ ಎಂದು ಹೇಳಿದರು.

Related