ನಿರ್ದೇಶನ ಆಹ್ವಾನ ಸ್ವೀಕರಿಸಿದ ಟ್ರಂಪ್ !

ನಿರ್ದೇಶನ ಆಹ್ವಾನ ಸ್ವೀಕರಿಸಿದ ಟ್ರಂಪ್ !

ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ನಾಮ ನಿರ್ದೇಶನ ಆಹ್ವಾನವನ್ನು ಸ್ವೀಕರಿಸುವ ಮೂಲಕ, ಎರಡನೇ ಅವಧಿಗೆ ಅಮೇರಿಕದ ಅಧ್ಯಕ್ಷ ಗಾದಿ ಮೇಲೆ ಕೂರಲು ಟ್ರಂಪ್ ಸಿದ್ಧತೆ ನಡೆಸಿದ್ದಾರೆ.

ಅಮೇರಿಕದಂತಹ ಶ್ರೇಷ್ಠ ರಾಷ್ಟ್ರದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಗೌರವದ ವಿಷಯ ಎಂದು ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ , ಅಮೇರಿಕದ ಚಹೆರೆಯನ್ನೇ ಬದಲಿಸಲಾಗಿದೆ. ಅಮೇರಿಕ ಫಸ್ಟ್ ನೀತಿ ದೇಶವನ್ನು ಮತ್ತಷ್ಟು ಸದೃಢಗೊಳಿಸಿದ್ದು, ಜನತೆ ಈ ಸಾಧನೆಗಳನ್ನು ಗುರುತಿಸಲಿದೆ ಎಂದು ಟ್ರಂಪ್ ಭರವಸೆ ವ್ಯಕ್ತಪಡಿಸಿದ್ದಾರೆ.

ಮುಕ್ತ ಪ್ರಜಾಪ್ರಭುತ್ವ ಹಾಗೂ ವಿಶ್ವ ಕಲ್ಯಾಣದ ಅಮೇರಿಕದ ಶ್ರೇಷ್ಠ ನೀತಿಯನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದವು. ಇದನ್ನು ತಡೆಗಟ್ಟಿ ರಾಜತಾಂತ್ರಿಕ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಧ್ವನಿ ಗಟ್ಟಿಗೊಳ್ಳುವಂತೆ ಮಾಡಲಾಗಿದೆ ಎಂದು ಟ್ರಂಪ್ ನುಡಿದರು.

Related