ಭೂ ರಹಿತರಿಗೆ ಭೂಮಿ ಒದಗಿಸಲು: ಪ್ರಸ್ತಾವನೆ ಸಲ್ಲಿಕೆ

ಭೂ ರಹಿತರಿಗೆ ಭೂಮಿ ಒದಗಿಸಲು: ಪ್ರಸ್ತಾವನೆ ಸಲ್ಲಿಕೆ

ಮುದ್ದೇಬಿಹಾಳ : ಕೋವಿಡ್-19 ಲಾಕ್‌ಡೌನ್ ಘೋಷಣೆಯಾದ ನಂತರ ತಾಲೂಕಿನಲ್ಲಿ 15-20 ಸಾವಿರ ಕೂಲಿಕಾರ್ಮಿಕರು ಇದ್ದು ಅವರಿಗೆ ಎನ್‌ಆರ್‌ಇಜಿ ಹಾಗೂ ಪಂಚಾಯಿತಿ ಮಟ್ಟದಲ್ಲಿ ವಿವಿಧ ಕೆಲಸಗಳನ್ನು ಕೈಗೊಳ್ಳಲು ಉದ್ಯೋಗವಕಾಶ ಕಲ್ಪಿಸುವಂತೆ, ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಾಪಂ ಇಓ ಶಶಿಕಾಂತ ಶಿವಪೂರೆ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದೆ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನಲ್ಲಿ ಸಾಕಷ್ಟು ಜನ ಭೂರಹಿತ ಕಾರ್ಮಿಕರಿದ್ದು ಅವರಿಗೆ ಸರಕಾರಿ ಜಮೀನಿನಲ್ಲಿ ಜಾಗ ಗುರುತಿಸಿ ತುರ್ತಾಗಿ ನೀಡಲು ಪ್ರಸ್ತಾವನೆ ಕಳಿಸಲು ಪಂಚಾಯಿತಿ ಮಟ್ಟದಲ್ಲಿ ಒಂದು ಕಮಿಟಿ ಇರುತ್ತದೆ. ಹಾಗೂ ತಾಪಂ ಮಟ್ಟದಲ್ಲಿ ಎಸಿ ಹಾಗೂ ಇಓ ನೇತೃತ್ವದಲ್ಲಿ ಒಂದು ಕಮೀಟಿ ಇರುತ್ತದೆ.ಅವರಿಗೆ ಜಮೀನು ಕೊಡಲು ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಚಂದ್ರಕಾಂತ ಕುಂಬಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಲಸೆ ಬಂದಿರುವ ಕಾರ್ಮಿಕರಿಗೆ ಪಂಚಾಯಿತಿ ಮಟ್ಟದಲ್ಲಿ ಕೆಲಸ ಕೊಡಲು ಪಿಡಿಓಗಳಿಗೆ ಸೂಚನೆ ನೀಡಿದೆ. ಅದರಂತೆ ಎನ್.ಆರ್.ಇ.ಜಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.

Related