ಕೊರೊನಾಗೆ ಮತ್ತೊಂದು ಬಲಿ

ಕೊರೊನಾಗೆ ಮತ್ತೊಂದು ಬಲಿ

ಬೆಂಗಳೂರು, ಏ. 21 : ಕಲಬುರ್ಗಿಯಲ್ಲಿ 80 ವರ್ಷದ ವೃದ್ಧ ವಿಧಿವಶರಾಗಿದ್ದರು. ಇವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಟ್ವೀಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪಾರ್ಕಿನ್ಸನ್ನಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ಧ ವಿಧಿವಶ ನಂತರ ಬಂದ ವೈದ್ಯಕೀಯ ವರದಿಯಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ.
ಕಲಬುರ್ಗಿಯಲ್ಲಿ ಜೀವಹಾನಿಯಾದ ವೃದ್ಧನ ವರದಿ ನಿನ್ನೆ ರಾತ್ರಿ ವರದಿ ಬಂದಿದ್ದು, ಇವರಿಗೆ ಕೊರೊನಾ ಪೊಸಿಟಿವ್ ಇರುವುದು ತಿಳಿದು ಬಂದಿದೆ ಎಂದು ಡಾ.ಕೆ ಸುಧಾಕರ್ ಹೇಳಿದ್ದಾರೆ.

Related