ಟಿಕ್ ಟಾಕ್ ಮನರಂಜನೆ ಮಾಧ್ಯಮವೇ ಹೊರತು, ಅದೇ ಜೀವನದ ಭಾಗವಲ್ಲ

  • In State
  • March 10, 2020
  • 309 Views
ಟಿಕ್ ಟಾಕ್ ಮನರಂಜನೆ ಮಾಧ್ಯಮವೇ ಹೊರತು, ಅದೇ ಜೀವನದ ಭಾಗವಲ್ಲ

ಬೆಂಗಳೂರು, ಮಾ. 10: ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ಎಂಬುವುದು ಚಿಕ್ಕವರಿಂದ ಹಿಡಿದು ವಯಸ್ಸಾದ ವೃದ್ಧರೂ ಸಹ ಈ ಟಿಕ್ ಟಾಕ್ ಎಂಬ ಮಾಯೆಗೆ ಮರುಳಾಗಿದ್ದಾರೆ. ಈ ಟಿಕ್ ಟಾಕ್ ಎಂಬುವುದು ಕೆಲವರಿಗೆ ವೇದಿಕೆ ಆಗಿದೆ ಇನ್ನು ಕೆಲವರಿಗೆ ತಮ್ಮ ಸಂಸಾರದ ಮೇಲೆ ನಿಗಾವಹಿಸುವುದು ಬಿಟ್ಟು ತಮ್ಮ ಸಂಸಾರವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ….

ಟಿಕ್ಟಾಕ್ ಅನ್ನೋಂದು ಮನುಷ್ಯರಲ್ಲಿ ಇತ್ತೀಚಿಗೆ ಊಟ ನಿದ್ದೆಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಇನ್ನು ಈ ಟಿಕ್ ಟಾಕ್ ಕೌಟುಂಬಿಕ ಸಮಸ್ಯೆಗಳ ಮೇಲೆ ನಕಾರತ್ಮಕ ಪರಿಣಾಮವನ್ನು ಬೀರುವುದನ್ನು ಕಾಣಬಹುದಾಗಿದೆ. ಇದಲ್ಲದೇ ಟಿಕ್ಟಾಕ್ ಗೀಳಿನಿಂದಾಗಿ ಗಂಡ ಹೆಂಡತಿಯ ನಡುವೆ ವೈಮನಸ್ಸು ಮೂಡಿ ಬರುತ್ತಿದ್ದು ಇತ್ತೀಚಿಗೆ ಅದು ಡೈವೋರ್ಸ್ ಗಳಿಗೆ ಕೂಡಕಾರಣವಾಗುತ್ತಿದೆ.

ಈ ನಡುವೆ ತನ್ನ ಹೆಂಡತಿಯ ಟಿಕ್ಟಾಕ್ ಗೀಳಿಗೆ ಬೇಸರಗೊಂಡಿರುವ ವ್ಯಕ್ತಿಯೊಬ್ಬ ಮದ್ವೆಯಾದ ಮೂರೇ ತಿಂಗಳಿಗೆ ಡೈವೋರ್ಸ್ ನೀಡುವುದಕ್ಕೆ ಮುಂದಾಗಿದ್ದಾರೆ. (ಗೌಪತ್ಯೆಯ ಕಾರಣಕ್ಕಾಗಿ ಇಬ್ಬರ ಮಾಹಿತಿಯನ್ನು ಬಹಿರಂಗ ಪಡಿಸುವುದಕ್ಕೆ ಸಾಧ್ಯವಿಲ್ಲ). ಡೈವೋರ್ಸ್ ಗೆ ಸಂಬಂಧಪಟ್ಟಂತೆ ಆ ಗಂಡ ತನ್ನ ಆತ್ಮೀಯ ಸ್ನೇಹಿತ ಜೊತೆಗೆ ತನ್ನ ನೋವನ್ನು ಹಂಚಿಕೊಂಡಿದ್ದು, (ಆಪ್ತಸಲಹೆ) ತನ್ನ ಹೆಂಡತಿ ಮಾಡುತ್ತಿರುವ ಟಿಕ್ಟಾಕ್ನಿಂದಾಗಿ ನನ್ನ ಕುಟುಂಬದಲ್ಲಿ ಸಂತೋಷವೇ ಇಲ್ಲದ ಹಾಗೇ ಆಗಿದೆ. ನನ್ನ ಹೆಂಡತಿ ಯಾವಾಗಲೂ ಟಿಕ್ಟಾಕ್ ಅಂತ ಇರುತ್ತಾಳೆ. ಮನೆಯ ಯಾವ ಜವಬ್ದಾರಿ ಬಗ್ಗೆ ಕೂಡ ಆಕೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ, ಇದರಿಂದ ನನಗೆ ನನ್ನ ವೈವಾಹಿಕ ಜೀವನದ ಬಗ್ಗೆ ಜಿಗುಪ್ಸೆ ಬರುತ್ತಿದ್ದು, ನಾನು ಇನ್ಮುಂಧೆ ಆಕೆಯ ಜೊತೆಗೆ ಸಂಸಾರ ನಡೆಸಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ನನಗೆ ಡೈವೋರ್ಸ್ ನೀಡುವುದಕ್ಕೆ ಸಂಬಂಧಪಟ್ಟಂತೆ ಕಾನೂನು ಸಲಹೆ ನೀಡು ಅಂತ ಮನವಿ ಮಾಡಿಕೊಂಡಿದ್ದಾನೆ.

ಗೆಳಯನ ಸಮಸ್ಯೆಗೆ ಉತ್ತರ ನೀಡಿದ ಆ ಸ್ನೇಹಿತ ಬದುಕು ಇಷ್ಟಕ್ಕೆ ಕೊನೆಯಾಗುವುದಿಲ್ಲ, ನಿನ್ನ ಹೆಂಡತಿಗೆ ಸಮಸ್ಯೆ ಬಗ್ಗೆ ಸರಿಯಾಗಿ ಮನವರಿಕೆ ಮಾಡು, ಟಿಕ್ ಟಾಕ್ ಮನರಂಜನೆ ಮಾಧ್ಯಮವೇ ಹೊರತು, ಅದೇ ಜೀವನದ ಭಾಗವಲ್ಲ ಈ ಬಗ್ಗೆ ಆಕೆಗೆ ಮನವರಿಕೆ ಮಾಡುವುದು ಮುಖ್ಯ ಡೈವೋರ್ಸ್ ಎಲ್ಲ ಸಮಸ್ಯೆಗೂ ಪರಿಹಾರವಾಗೋದಿಲ್ಲ, ನಿನ್ನ ಮದ್ವೆಯಾಗಿ ಇನ್ನೂ 3 ತಿಂಗಳಾಗಿದೆ, ಹೀಗಾಗಿ ನಿಮ್ಮಿಬ್ಬರ ನಡುವೆ ಸಾಕಷ್ಟು ವಿಷಯದಲ್ಲಿ ವಿಷಯಗಳು ಪರಸ್ಪರ ಹಂಚಿಕೊಳ್ಳಬೇಕಾಗಿದೆ ಯಾವ ಕಾರಣಕ್ಕೂ ಡೈವೋರ್ಸ್ ಅಂತ ವಿಷಯಕ್ಕೆ ಮುಂದಾಗ ಬೇಡ ಅಂಥ ಆಪ್ತ ಸಲಹೆ ನೀಡಿದ್ದಾರೆ.

 

Related