ಹಿಂದೂ ಹಿಂದೂ ಎಂದು ಮಾತನಾಡೋರು ಮೊದಲು ದಲಿತರ ಬಗ್ಗೆ ಮಾತನಾಡಲಿ: ಸಚಿವ ತಿಮ್ಮಾಪುರ

ಹಿಂದೂ ಹಿಂದೂ ಎಂದು ಮಾತನಾಡೋರು ಮೊದಲು ದಲಿತರ ಬಗ್ಗೆ ಮಾತನಾಡಲಿ: ಸಚಿವ ತಿಮ್ಮಾಪುರ

ಬೆಂಗಳೂರು: ಯಾವುದೇ ಕಾರಣಕ್ಕೂ ದಲಿತರನ್ನು ದೇವಸ್ಥಾನದ ಒಳಗಡೆ ಬಿಡುವುದಿಲ್ಲ. ನಾವು ಕೇವಲ ದೇವಸ್ಥಾನದ ಹೊರಗಡೆಯಿಂದನೇ ಕೈಮುಗಿಬೇಕಾಗಿರುತ್ತದೆ ಎಂದು ಸಚಿವ ಆರ್ ಬಿ ತಿಮ್ಮಾಪುರ ಅವರು ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೂ ಧರ್ಮ ಅನ್ನೋದು ಯಾರೊಬ್ಬರ ಸ್ವತ್ತು ಅಲ್ಲ ಅದು ಅವರ ಆಸ್ತಿನೂ ಅಲ್ಲ. ನಾವು ಆಂಜನೇಯ ದೇವಸ್ಥಾನದಿಂದ ಹೊರಗೆ ನಿಂತವರು. ದಲಿತರನ್ನ ದೇವಸ್ಥಾನದ ಒಳಗೆ ಕರೆಯುವುದಿಲ್ಲವಲ್ಲ. ದಲಿತರನ್ನ ದೇವಸ್ಥಾನದ ಒಳಗೆ ಕರೆಯುತ್ತಾರಾ? ಊರಿನ ಒಳಗಿನ ದೇವಸ್ಥಾನಕ್ಕೆ ಕರೆಯುವುದಿಲ್ಲ. ರಾಮ ಮಂದಿರ ಎಷ್ಟರ ಮಟ್ಟಿಗೆ ದೇವರು ನಮಗೆ ಎಂದು ಪ್ರಶ್ನಿಸಿದರು.

ಇಲ್ಲಿಂದನೇ ನಾವು ನಮಸ್ಕಾರ ಮಾಡಬೇಕು ಅಲ್ಲವಾ? ಅಲ್ಲಿಗೆ ಹೋಗಲೇಬೇಕು ಅಂತ ಏನು ಇಲ್ವಲ್ಲಾ ಎಂದ ಆರ್‌ಬಿ ತಿಮ್ಮಾಪುರ, ದಲಿತರನ್ನ ಒಳಗೆ ಕರೆಯುತ್ತಿದ್ದಾರಾ? ಹಿಂದೂ ಹಿಂದೂ ಮಾತನಾಡುವವರು ಮೊದಲು ದಲಿತರ ಬಗ್ಗೆ ಮಾತನಾಡಲಿ. ಹಿಂದೂ ಅಂದ್ರೆ ದಲಿತರು ಇದ್ದಾರೋ ಇಲ್ಲವೋ‌ ಅಂತ ಹೇಳಲಿ. ಇದ್ರೆ ದಲಿತರ ಸಂಸ್ಕ್ರತಿ ಸಂಸ್ಕಾರದಲ್ಲಿ ಅವರನ್ನು ಅಳವಡಿಸಿಕೊಳ್ಳಲಿ ಎಂದರು.

 

Related