ಈ ಬಾರಿ ಬಜೆಟ್ ನಲ್ಲಿ ಬಿಬಿಎಂಪಿಯಿಂದ ಭಾರೀ ಬೇಡಿಕೆಗೆ ಮನವಿ

ಈ ಬಾರಿ ಬಜೆಟ್ ನಲ್ಲಿ ಬಿಬಿಎಂಪಿಯಿಂದ ಭಾರೀ ಬೇಡಿಕೆಗೆ ಮನವಿ

ಬೆಂಗಳೂರು: ಫೆಬ್ರುವರಿ 16 ರಂದು ಕರ್ನಾಟಕ ರಾಜ್ಯದಲ್ಲಿ ಬಜೆಟ್ ಮಂಡನೆ ನಡೆಯುತ್ತಿದ್ದು, ಇನ್ನೂ ಈ ಬಜೆಟ್ ಮಂಡನೆಯಲ್ಲಿ ಬಿಬಿಎಂಪಿ ಸರ್ಕಾರಕ್ಕೆ 8,000 ಸಾವಿರ ಕೋಟಿ ಅನುದಾನ ನೀಡಬೇಕೆಂದು ಮನವಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಹಣವನ್ನು ಪೂರೈಸಲು ಗರಿಷ್ಠ ಮೊತ್ತ ಬೇಕಾಗುತ್ತದೆ ಎಂದು ಈ ಬಾರಿ ಬಜೆಟ್ ನಲ್ಲಿ ಬಿಬಿಎಂಪಿಗೆ 8 ಸಾವಿರ ಕೋಟಿ ನೀಡಬೇಕೆಂದು ಬಿಬಿಎಂಪಿಯು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಇನ್ನು ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮತ್ತು ನಡೆಯುತ್ತಿರುವ ಕಾಮಗಾರಿಗಳಿಗೆ ಸುಮಾರು 3,000 ಕೋಟಿ ರೂ. ಬೇಕಾಗಿದೆ. ಇನ್ನು ಗುತ್ತಿಗೆದಾರರಿಗೆ ಬಿಬಿಎಂಪಿ ನೀಡಬೇಕಿರುವ ಒಟ್ಟು ಬಾಕಿ ಮೊತ್ತ 2,700 ಕೋಟಿ ರೂಪಾಯಿ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 200 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗೆ 600 ಕೋಟಿ ರೂ., ಮಳೆ ನೀರು ಚರಂಡಿಗಳ ಅಭಿವೃದ್ಧಿಗೆ 200 ಕೋಟಿ ರೂ. ಅಗತ್ಯವಿದೆ ಎಂದು ಬಿಬಿಎಂಪಿ ಸರ್ಕಾರಕ್ಕೆ ತಿಳಿಸಿದೆ.

 

Related