ರಾತ್ರಿ ಕರ್ಫ್ಯೂ ಮಾಡುವುದು ಅಗತ್ಯವಿಲ್ಲ ; ಸಚಿವ

ರಾತ್ರಿ ಕರ್ಫ್ಯೂ ಮಾಡುವುದು ಅಗತ್ಯವಿಲ್ಲ ; ಸಚಿವ

ಬೆಂಗಳೂರು : ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಮಾಡುವ ಅಗತ್ಯವಿಲ್ಲ. ಆದರೆ ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾತ್ರಿ ಕರ್ಫ್ಯೂ ಜಾರಿ ಮಾಡುವ ಕುರಿತು ಚರ್ಚೆಯಾಗಿಲ್ಲ. ತಾಂತ್ರಿಕ ಸಲಹಾ ಸಮಿಯೂ ಈ ಬಗ್ಗೆ ಯಾವುದೇ ಸಲಹೆ ನೀಡಿಲ್ಲ. ಹಾಗಾಗಿ ನೈಟ್ ಕರ್ಫ್ಯೂ ಪ್ರಶ್ನೆಯೇ ಇಲ್ಲ ಎಂದರು.

ಜನವರಿ ಫೆಬ್ರವರಿಯಲ್ಲಿ ರಾಜ್ಯದಲ್ಲಿ 2ನೇ ಅಲೆ ಬರುವ ಸಾಧ್ಯತೆ ಇದೆ. ಅದಕ್ಕೆ ತಜ್ಞರ ಸಮಿತಿ ಸ್ಪಷ್ಟ ಮಾಹಿತಿ ನೀಡಿದೆ. ಮುಂದಿನ 45 ದಿನ ಮಹತ್ವದ್ದಾಗಿದೆ. ಲಾಕ್‌ಡೌನ್ ಸಮಯದಲ್ಲಿ ತೆಗೆದುಕೊಂಡ ಕ್ರಮಗಳನ್ನು ಮತ್ತೆ ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದರು.

Related