ನೇರಳೆ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಲಾಭ

ನೇರಳೆ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಲಾಭ

ಮಳೆಗಾಲ ಎಂದ ತಕ್ಷಣ ನಮಗೆ ನೆನಪಾಗುವುದು ನೇರಳೆ ಹಣ್ಣು. ಈ ಮಳೆಗಾಲದಲ್ಲಿ ಸಿಗುವಂತಹ ನೇರಳೆ ಹಣ್ಣು ತಿನ್ನುವುದರಿಂದ ಹಲವಾರು ಆರೋಗ್ಯದ ಪ್ರಯೋಜನಗಳನ್ನು ನಾವು ಪಡೆಯಬಹುದು.

ನೇರಳೆ ಹಣ್ಣನ್ನು ಕ್ರಮೇಣವಾಗಿ ನಾವು ಪ್ರತಿನಿತ್ಯ 6-10 ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಸಕ್ಕರೆ ಕಾಯಿಲೆ, ಕಣ್ಣಿನ ಆರೋಗ್ಯ, ಚರ್ಮದ ಕಾಪಾಡಿಕೊಳ್ಳಬಹುದು.

ಹೌದು, ಈ ಹಣ್ಣು ನೋಡಲು ಸಣ್ಣಾಗಿದ್ದರು ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು ಅಡಗಿದೆ. ಗೋಲಿ ಆಕಾರದ ಸಣ್ಣ ಹಣ್ಣು ತನ್ನೊಳಗೆ ಹತ್ತು ಹಲವು ಆರೋಗ್ಯ ಪೂರಕ ಅಂಶಗಳನ್ನು ಅಡಕವಾಗಿಸಿಕೊಂಡಿದೆ. ಪ್ರೋಟೀನ್, ವಿಟಮಿನ್, ಆ್ಯಂಟಿ ಆಕ್ಸಿಡೆಂಟ್‌ಗಳು, ಮ್ಯಾಂಗನೀಸ್, ಪೋಟ್ಯಾಶಿಯಂ, ಕ್ಯಾಲ್ಸಿಯಂ ಸೇರಿ ಅಪಾರ ಪೋಷಕಾಂಶಗಳನ್ನು ಹೊಂದಿರುವ ನೇರಳೆ, ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ.

ಸಕ್ಕರೆ ಮಟ್ಟ ನಿಯಂತ್ರಣ

ನೇರಳೆಯ ಬೀಜಗಳನ್ನು ಒಣಗಿಸಿ, ಪುಡಿ ಮಾಡಿ ಸಂಗ್ರಹಿಸುವ ಆರ್ಯುವೇದ ತಜ್ಞರು, ಅದನ್ನು ಹಲವು ಕಾಯಿಲೆಗಳಿಗೆ ಔಷಧವಾಗಿ ಬಳಸುತ್ತಾರೆ. ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವ ಗುಣ ನೇರಳೆ ಬೀಜದಲ್ಲಿದೆ. ಬೀಜದಲ್ಲಿರುವ ಹೈಪೋಗ್ಲೈಸೆಮಿಕ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ.

ರಕ್ತಹೀನತೆ ನಿವಾರಣೆ

ರುತುಚಕ್ರದ ವೇಳೆ ಮಹಿಳೆಯರಲ್ಲಿ ಉಂಟಾಗುವ ರಕ್ತಸ್ರಾವದಿಂದ ಆಗುವ ರಕ್ತದ ಹಾನಿಯನ್ನು ಸರಿದೂಗಿಸುವ ಶ್ರೇಷ್ಠ ಗುಣ ನೇರಳೆ ಹಣ್ಣಿನಲ್ಲಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಸಾಧ್ಯವಾದರೆ ಪ್ರತಿ ದಿನವೂ ನೇರಳೆ ಹಣ್ಣು ಸೇವಿಸಬೇಕು.

ಅತಿಸಾರಕ್ಕೆ ಪರಿಹಾರ

ನೇರಳೆ ಹಣ್ಣು ಸೇವಿಸಿದರೆ ಅತಿಸಾರ ಕಾಯಿಲೆ ಕಡಿಮೆಯಾಗುತ್ತದೆ ಹಾಗೂ ನೇರಳೆ ಹಣ್ಣನ್ನು ತಿನ್ನುವುದರಿಂದ ಜೀರ್ಣ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಹಣ್ಣಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ಜಾಮೂನಿನಲ್ಲಿರುವ ವಿಟಮಿನ್ ಸಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಆರೋಗ್ಯಕರ ಒಸಡುಗಳನ್ನು ಕಾಪಾಡಿಕೊಳ್ಳಲು ಮತ್ತು ದುರ್ವಾಸನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಈ ಹಣ್ಣನ್ನು ಸೇವಿಸುವುದರಿಂದ ಚರ್ಮದಲ್ಲಿ ಉಂಟಾಗುವಂತಹ ಗುಳ್ಳೆಗಳನ್ನು ನಾವು ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ.

Related