ಅಕ್ಕಿ ವಿತರಣೆಗೆ ಕೈ ಜೋಡಿಸಿದ ರಾಜ್ಯ ಸರ್ಕಾರ

ಅಕ್ಕಿ ವಿತರಣೆಗೆ ಕೈ ಜೋಡಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆಯಡಿ ಮುಂದಿನ  5ತಿಂಗಳು ಉಚಿತವಾಗಿ ಪಡಿತರ ನೀಡುವುದಾಗಿ ಘೋಷಿಸಿದ ಬೆನ್ನಲ್ಲೆ, ರಾಜ್ಯ ಸರ್ಕಾರವೂ ಗ್ರಾಹಕರಿಗೆ ಅದೇ ಮಾದರಿಯಲ್ಲಿ ಆಹಾರಧಾನ್ಯ ವಿತರಿಸಲು ಮುಂದಾಗಿದೆ.

ಈ ತಿಂಗಳಿನಿಂದಲೇ ಅನ್ವಯವಾಗುವಂತೆ ಮುಂದಿನ ಐದು ತಿಂಗಳು ಪಡಿತರಚೀಟಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ, ಬೇಳೆ, ಗೋಧಿ, ರಾಗಿ ವಿತರಣೆ ಮಾಡಲು ತೀರ್ಮಾನಿಸಿದೆ.

ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ಅಂತ್ಯದವರೆಗೆ 4. 31 ಕೋಟಿ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುವುದು. ರಾಜ್ಯದ ಯಾವೊಬ್ಬ ಪ್ರಜೆಯೂ ಆಹಾರವಿಲ್ಲದೆ ಬಳಲಬಾರದು. ಇದಕ್ಕಾಗಿ ನಮ್ಮ ಇಲಾಖೆ ಕೇಂದ್ರದ ಮಾದರಿಯಲ್ಲೇ ರಾಜ್ಯ ಸರ್ಕಾರವು ಪಡಿತರಧಾನ್ಯ ವಿತರಣೆ ಮಾಡಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

Related