ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೆಬಲ್ ಸ್ಟಾರ್ ಪುತ್ರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೆಬಲ್ ಸ್ಟಾರ್ ಪುತ್ರ

ಬೆಂಗಳೂರು: ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ – ಅವಿವಾ ಬಿಡಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ, ಹಿರಿಯ – ಕಿರಿಯ ಸ್ನೇಹಿತರ ಮುಂದೆ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಮದುವೆ ಕಾರ್ಯ ಆರಂಭ ಆಗಿದೆ. ಗೌಡರ ಸಂಪ್ರದಾಯದಂತೆ ಈ ವಿವಾಹ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರ ಕಲ್ಯಾಣಮಂಟಪದಲ್ಲಿ ಮದುವೆ ನಡೆಯಲಿದೆ. ಅಂಬರೀಷ್ ಕುಟುಂಬ ರಾಜಕೀಯ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ.

ಕಳೆದ ವರ್ಷ ಡಿ.11 ರಂದು  ಖ್ಯಾತ ಫ್ಯಾಷನ್‌ ಡಿಸೈನರ್‌ ಆಗಿರುವ ಪ್ರಸಾದ್‌ ಬಿಡಪ್ಪ ಅವರ ಪುತ್ರಿ ಅವಿವಾ ಬಿಡಪ್ಪ ಅವರೊಂದಿಗೆ ರೆಬೆಲ್‌ ಸ್ಟಾರ್‌ ಉಂಗುರವನ್ನು ತೊಡಗಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಜೂ.7 ರಂದು ಅದ್ದೂರಿಯಾಗಿ ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

Related