ರಣಭೀಕರ ಮಳೆಗೆ ವೃದ್ಧೆನ ಪರದಾಟ

ರಣಭೀಕರ ಮಳೆಗೆ ವೃದ್ಧೆನ ಪರದಾಟ

ವಿಜಯಪುರ : ರಣಭೀಕರ ಮಳೆಗೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿದೆ. ಮೂಕ ಪ್ರಾಣಿಗಳು ಆಹಾರವಿಲ್ಲದೆ ರೋದಿಸುತ್ತಿವೆ. ಜನರ ಬುದುಕು ಮೂರಾಬಟ್ಟೆಯಾಗಿದೆ.

ಕೃಷಿ ಜಮೀನು ಜಲಾವೃತವಾಗಿದ್ದು, ಅಪಾರಪ ಪ್ರಮಾಣದ ಸಾವು-ನೋವು ಸಂಭವಿಸಿದೆ. ಮನೆಗಳಿಗೆಲ್ಲ ನೀರು ನುಗ್ಗಿ ಜನ ಊರು ಬಿಡುತ್ತಿದ್ದಾರೆ.

ಭೀಮಾತೀರದಲ್ಲಿ ಭೀಮಾನದಿಯ ಪ್ರವಾಹ ಉಂಟಾಗಿದ್ದು, ಪ್ರಾಣಭಯದಲ್ಲಿ ಮರವೇರಿ ಕುಳಿತ 110 ವರ್ಷದ ವೃದ್ಧೆ ಮತ್ತು ಇವರ ಪುತ್ರ ಇಬ್ಬರು ರಾತ್ರಿಯಿಡೀ ಚಳಿ-ಮಳೆಯಲ್ಲೇ ಜಾಗರಣೆ ಮಾಡಿರುವ ಘಟನೆ ಇಂಡಿ ತಾಲೂಕಿನಲ್ಲಿ ಸಂಭವಿಸಿದೆ.

ಭೀಮಾ ನದಿಯಲ್ಲಿ ನೀರು ಹೆಚ್ಚಾದ ಕಾರಣ ಇಂಡಿ ತಾಲೂಕಿನ ಹಿಂಗಣಿ ಗ್ರಾಮದ ಶಿವಮಲ್ಲಪ್ಪ ಹಾಗೂ ಇವರ ತಾಯಿ ನೀಲವ್ವ ಗುರುವಾರ ಸಂಜೆ ಮರವೇರಿ ಕುಳಿತಿದ್ದರು. ಶುಕ್ರವಾರ ಬೆಳಗ್ಗೆ ಈ ವಿಷಯ ತಿಳಿಯುತ್ತಿದ್ದಂತೆ ಅವರ ರಕ್ಷಣೆಗೆ ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಧಾವಿಸಿದರು. ಮರದಲ್ಲಿ ಕುಳಿತ್ತಿದ್ದ ಅಮ್ಮ-ಮಗನನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.

Related