ಮಾಸ್ಕ್ ಹಾಕದವರಿಗೆ ದಂಡ ಹಾಕಿದ ಪ.ಪಂ ಅಧಿಕಾರಿ

ಮಾಸ್ಕ್ ಹಾಕದವರಿಗೆ ದಂಡ ಹಾಕಿದ ಪ.ಪಂ ಅಧಿಕಾರಿ

ಹುಣಸಗಿ : ರಾಜ್ಯದಲ್ಲಿ 2ನೇ ಅಲೆ ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ದಿಢೀರ ಅಂತಾ ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಆದೇಶಾನುಸಾರ ಪಟ್ಟಣದಲ್ಲಿ ಲಾಕ್‌ಡೌನ್ ಹೇರಲಾಗಿದ್ದು ಮಾಸ್ಕ್ ಹಾಕದೇ ತಿರುಗಾಡುತ್ತಾರೋ ಅಂಥವರಿಗೆ 100 ರೂ. ದಂಡ ವಿಧಿಸಲಾಗುತ್ತಿದೆ ಯಾರೂ ಅನಾವಶ್ಯಕವಾಗಿ ಹೊರಗಡೆ ಬರಬಾರದೆಂದು ಪ.ಪಂ ಮುಖ್ಯಾಧಿಕಾರಿ ಅರುಣಕುಮಾರ ಚವ್ಹಾಣ ಅವರು ಹೇಳಿದರು.

ಪಟ್ಟಣದಲ್ಲಿ ಪತ್ರಿಕಾ ಮಾಧ್ಯಮ ಜೊತೆ ಮಾತನಾಡಿ, ಸರ್ಕಾರದ ದೀಢೀರ ಅಂತಾ ಆದೇಶ ಬಂದ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಲಾಗುತ್ತಿದೆ. ಅಲ್ಲದೇ ಸಾರ್ವಜನಿಕರಿಗೆ ಬೇಕಾಗಿರುವಂತ ದಿನ ನಿತ್ಯ ಬಳಕೆ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಕಿರಾಣಿ ವಸ್ತುಗಳು ಬಿಟ್ಟು ಉಳಿದೆಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗುತ್ತಿದೆ.

ಹುಣಸಗಿ ಪಟ್ಟಣಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಸಾರ್ವಜನಿಕರು ಅನಾವಶ್ಯಕವಾಗಿ ತಿರುಗಾಡದೇ ಮತ್ತು ಮಾಸ್ಕ್ ಇಲ್ಲದೇ ಹೊರಗಡೆ ಬರದೇ ತಮ್ಮ ತಮ್ಮ ಮನೆಯಲ್ಲಿಯೇ ಉಳಿದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ತಮ್ಮ ಕುಟುಂಬದವರನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.
ಹುಣಸಗಿ ಪಟ್ಟಣ ಪಂಚಾಯತನ ಸಿಬ್ಬಂದಿಗಳು ಗ್ರಾಮ ಸಹಾಯಕರು, ಬಿಲ್ ಕಲೆಕ್ಟರ್‌ಗಳು ಇನ್ನಿತರರಿದ್ದರು.

Related