ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ಭರವಸೆ ನೀಡಿದ ಸಚಿವರು

ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ಭರವಸೆ ನೀಡಿದ ಸಚಿವರು

ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ) ವತಿಯಿಂದ ನಡೆದ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ-2024ದ ಯಶಸ್ವಿಯ ಕುರಿತಾಗಿ ಮಾನ್ಯ ಕೌಶಲ್ಯಭಿವೃದ್ದಿ, ಜೀವನೋಪಾಯ, ಉದ್ಯಮಶೀಲತೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀಯುತ ಡಾ.ಶರಣ್ ಪ್ರಕಾಶ್ ಪಾಟೀಲ್* ಮಾಧ್ಯಮದವರ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ಇಂತಹ ದೊಡ್ಡ ಮೇಳ ಎಂದರು. ಇದರಲ್ಲಿ ಒಟ್ಟು 86451 ಅಭ್ಯರ್ಥಿಗಳು ದಾಖಲೆ ಮಾಡಿಕೊಂಡಿದ್ದು, ಅದರಲ್ಲಿ 44527ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದಾರೆಂದು ತಿಳಿಸಿದರು.
ಈ ಬೃಹತ್ ಮೇಳದಲ್ಲಿ ಮಂತ್ರಿಗಳು ಹೇಳಿದ ಹಾಗೆ ಸ್ಥಳದಲ್ಲೇ 9654 ಜನರಿಗೆ ಅಫರ್ ಲೆಟರ್ ಕೊಟ್ಟಿದ್ದಾರೆ ಮತ್ತು ಅದರಲ್ಲಿ ಶಾರ್ಟ್ ಲಿಸ್ಟೆಡ್ 16,865 ಅಭ್ಯರ್ಥಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಇದಷ್ಟೆ ಅಲ್ಲದೆ ವಿಭಾಗೀಯ ಮೇಳವನ್ನು ಮೈಸೂರು, ಕಲಬುರ್ಗಿ, ಶಿವಮೊಗ್ಗ ದಲ್ಲೂ ಮೇಳವನ್ನು ಮಾಡಲು ನಿರ್ಧಾರ, ಇದನ್ನು ನಿರಂತರ ವಾಗಿ ಮಾಡಲು ಇಲಾಖೆ ನಿರ್ಧಾರ. ಹಾಗೆಯೇ ಯುವನಿಧಿ ಪ್ಲಸ್
ಕೊಪ್ಪಳ ಜಿಲ್ಲೆಯ ತಳಕಲ್ಲ ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಲ್ಟಿ ಸ್ಕಿಲ್ ಸೆಂಟರ್ಅನ್ನು ತೆರೆಯುವದಾಗಿ ಹೇಳಿದರು.
ಕಲಿಕೆ ಜೊತೆಗೆ ಕೌಶಲ್ಯಾ ಎಂಬ ದೇಯ ಉದ್ದೇಶವನ್ನು ನಮ್ಮ ಇಲಾಖೆ ಹೊಂದಿದೆ ಎಂದರು.
ವಿಧ್ಯಾರ್ಥಿಗಳಿಗೆ ಎಂದು ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಕೊಡಲು ನಮ್ಮ ಇಲಾಖೆ ಮುಂದೆ ಬಂದಿದೆ ಎಂದರು.
ಕೇರಳ ಮಾದರಿಯಲ್ಲಿ ನಮ್ಮ ರಾಜ್ಯಕ್ಕೆ ಹೊರದೇಶದಿಂದಲೂ ನಮಗೆ ಸಂಪರ್ಕ ಮಾಡುತ್ತಿದ್ದಾರೆ ಎಂದರು.

Related