ಬೆಂಗಳೂರಿನಲ್ಲಿ ನಕಲಿ ದಾಖಲೆಗಳ ಹಾವಳಿ

ಬೆಂಗಳೂರಿನಲ್ಲಿ ನಕಲಿ ದಾಖಲೆಗಳ ಹಾವಳಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ನಕಲಿ ದಾಖಲೆಗಳ ಹಾವಳಿ ಮತ್ತು ನಕಲಿ ಸೀಲ್ಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಹೌದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಿಡಿಎ ನಿವೃತ್ತ ಅಧಿಕಾರಿ ಒಬ್ಬರು ಸಾರ್ವಜನಿಕವಾಗಿ ಹರಾಜು ಹಾಕಬೇಕಿದ್ದ ನಿವೇಶನಗಳನ್ನು ನುಂಗಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಶಂಕರ್ ರಾಜ್ ಎಂಬುವವರು ಬಿಡಿಎ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಬಿಡಿಎ ಕಚೇರಿಯ ಸೀಲುಗಳನ್ನ ನಕಲಿ ಮಾಡಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅನ್ಯಾಯವೆಸಗಿದ್ದಾರೆ.

ಬಿಡಿಎ ಅಧಿಕಾರಿಯಾಗಿದ್ದ ಶಂಕರ್ ರಾಜ್ ಅರಸ್ ಬಿ.ಟಿ ಎನ್ನುವವರು ಬಿಡಿಎ ಕಚೇರಿಯ ನಕಲಿ ಸೀಲುಗಳನ್ನ ಬಳಸಿಕೊಂಡು ಸರ್ವಜನಿಕರಿಗೆ ಮೂರು ನಾಮ ಹಾಕಿದ್ದಾರೆ. ಬಿಡಿಎ ನಿವೃತ್ತ ಅಧಿಕಾರಿ ನಕಲಿ ದಾಖಲೆ ಸೃಷ್ಟಿಸಿ ತನ್ನ ಪತ್ನಿಯ ಹೆಸರಿಗೆ ನಿವೇಶನ ನೋಂದಣಿ ಮಾಡಿದ್ದು, ಈ ಹಿನ್ನೆಲೆ ಬಿಡಿಎ ನಿವೃತ್ತ ಉಪಕಾರ್ಯದರ್ಶಿ ಶಂಕರ್ ರಾಜ್ ಅರಸ್ ಬಿ.ಟಿ. ಹಾಗೂ ಪತ್ನಿ ವಿಜಯ ಲಕ್ಷ್ಮೀ ಅರಸ್ ವಿರುದ್ಧ ದೂರು ದಾಖಲಾಗಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯ ನಿವೇಶನವನ್ನ ಅಕ್ರಮವಾಗಿ ಪತ್ನಿ ಹೆಸರಿಗೆ ನೋಂದಣಿ ಮಾಡಿರುವ ಆರೋಪ ಇದಾಗಿದೆ.

ಬಿಡಿಎ ನಿವೃತ್ತ ಉಪಕಾರ್ಯದರ್ಶಿ ಶಂಕರ್ ರಾಜ್ ಅರಸ್ ಬಿ.ಟಿ. ಹಾಗೂ ಪತ್ನಿ ವಿಜಯ ಲಕ್ಷ್ಮೀ ಅರಸ್ ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರಿಗೆ ಹರಾಜು ಹಾಕಬೇಕಾಗಿದ್ದ ನಿವೇಶನವನ್ನ ತನ್ನ ಹೆಸರಿಗೆ ಅಕ್ರಮವಾಗಿ ಮಾಡಿಕೊಂಡಿದ್ದಾರೆ ಎಂದು ಬಿಡಿಎ ವಿಜಿಲೆನ್ಸ್ ಪೊಲೀಸ್ ಇನ್ಸ್ಪೆಕ್ಟರ್ ಸಂಜೀವರಾಯಪ್ಪ ಅವರು ದೂರು ನೀಡಿದ್ದಾರೆ.

Related