ಸಿಲಿಕಾನ್ ಲ್ಲಿ ಮರಣ ಮೃದಂಗ

ಸಿಲಿಕಾನ್ ಲ್ಲಿ ಮರಣ ಮೃದಂಗ

ಬೆಂಗಳೂರು: ಕಳೆದ ನಾಲ್ಕು ದಿನಗಳಿಂಗ ನಾವು ಗಮನಹರಿಸಿರುವ ಪ್ರಕಾರ, ಆಸ್ಪತ್ರೆಗೆ ದಾಖಲಾಗಿರುವ ಬಹುತೇಕ 60 ವರ್ಷದ ಮೇಲ್ಪಟ್ಟವರು ವ್ಯಕ್ತಿಗಳು ಲಕ್ಷಣಗಳನ್ನು ಆರಂಭದಲ್ಲಿ ನಿರ್ಲಕ್ಷಿಸಿದ್ದಾರೆ. ಸಾಮಾನ್ಯವಾದ ಶೀತವೆಂದು ಭಾವಿಸಿದ್ದಾರೆ. ಇಂತಹ ವ್ಯಕ್ತಿಗಳು ಬಂದ ಕೂಡಲೇ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಮಾಹಿತಿ ನೀಡಿ, ಪರೀಕ್ಷೆಗೊಳಪಡಿಸುವ ಕೆಲಸ ಮಾಡಬೇಕೆಂದು ರಾಜೀವ್ ಗಾಂದಿ ಆರೋಗ್ಯ ವಿವಿಯ ಉಪ ಕುಲಪತಿ ಡಾ.ಸಚಿದಾನಂದ ಅವರು ಹೇಳಿದ್ದಾರೆ.

ಕೊರೋನಾ ವೈರಸ್ ಲಕ್ಷಣಗಳ ಕುರಿತು ಜನರು ನಿರ್ಲಕ್ಷ್ಯ ತೋರುತ್ತಿದ್ದು, ಅಂತಿಮ ಕ್ಷಣಗಳಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸಾರಿ/ಐಎಲ್ಐ ಪ್ರಕರಣಗಳು ತಡವಾಗಿ ಬೆಳಕಿಗೆ ಬರುತ್ತಿದೆ. ಲಕ್ಷಣಗಳು ಕಂಡು ಬಂದರೂ ಜನರು ಸ್ವತಃ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವೈರಸ್ ಲಕ್ಷಣಗಳು ಗಂಭೀರವಾದ ಬಳಿಕ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

 

Related