ಮತಿಗೆಟ್ಟ ಬಿಬಿಎಂಪಿ, ರೊಚ್ಚಿಗೆದ್ದ ಜನ

ಮತಿಗೆಟ್ಟ ಬಿಬಿಎಂಪಿ, ರೊಚ್ಚಿಗೆದ್ದ ಜನ

ಬೆಂಗಳೂರು : ಈಗಾಗಲೇ ಲಾಕ್‌ಡೌನ್ ನಿಂದಾಗಿ  ಬಂದಾಗಿನಿಂದಾಗಿ  ಈಗಷ್ಟೇ ಚೇತರಿಕೆಯ ಹಾದಿಯನ್ನು ಪಡೆಯುತ್ತಿದ್ದಾರೆ. ಹೈರಾಣಾಗಿ, ಕೊಂಚ ನಿರಾಳರಾಗಿ ನಿಟ್ಟುಸಿರು ಬಿಡುತ್ತಿರುವಾಗಲೇ ಗ್ರಾಹಕರು ಮಾಸ್ಕ್ ಧರಿಸದೇ ಇದ್ದರೇ 5 ಸಾವಿರದಿಂದ 1 ಲಕ್ಷದವರೆಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಇದು ಬಿಬಿಎಂಪಿ ಸಾರ್ವಜನಿಕರ ಸುಲಿಗೆಗೆ ಇಳಿದಿದೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೊರೋನಾ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸದಿದ್ದರೇ ದಂಡ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೇ ದಂಡ ವಿಧಿಸಲಾಗುತ್ತಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಹೋಟೆಲ್, ಮಾಲ್, ಕಲ್ಯಾಣ ಮಂಟಪಗಳಲ್ಲಿ ಮಾಸ್ಕ್ ಧರಿಸದೇ ಗ್ರಾಹಕರು ಹಾಜರಾದ್ರೇ, ಐದು ಸಾವಿರದಿಂದ 1 ಲಕ್ಷದವರೆಗೆ ದಂಡ ವಿಧಿಸಲು ಮುಂದಾಗಿದೆ. ಬಿಬಿಎಂಪಿಯ ಈ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೃಹತ್ ಮಹಾನಗರ ಪಾಲಿಕೆ ಹಗಲು ದರೋಡೆ ಮಾಡುತ್ತಿದೆಯೇ.? ಸಾರ್ವಜನಿಕರ ವಸೂಲಿಗೆ ಇಳಿದಿದೆಯೇ.? ದಂಡ ಹಾಕುವುದನ್ನೇ ತನ್ನ ಮಾನದಂಡವನ್ನಾಗಿ ಮಾಡಿಕೊಂಡಿದೆಯೇ.? ಎಂಬುದಾಗಿ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related