ಶುರುವಾಯ್ತು ಆಲ್ಬಂ ಸಂಗ್‌ಗಳ ಜಮಾನ

ಶುರುವಾಯ್ತು ಆಲ್ಬಂ ಸಂಗ್‌ಗಳ ಜಮಾನ

ಕನ್ನಡ ಚಿತ್ರರಂಗದಲ್ಲಿ ಕೂಡಾ ಈಗ ಆಲ್ಬಂ ಸಾಂಗ್‌ಗಳ ಜಮಾನ ಶುರುವಾಗಿದೆ. ನೋಡು ಶಿವ… ಎಂಬ ಹೊಸ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು ಇದು ಬಹಳ ಅದ್ಧೂರಿಯಾಗಿ ಮೂಡಿಬಂದಿದೆ. ಸುಮಿತ್ ಎಂ.ಕೆ ಹಾಗೂ ಕಿರುತೆರೆ ನಟಿ ಮೇಘಾ ಶೆಟ್ಟಿ ಈ ಆಲ್ಬಂ ಹಾಡಿನಲ್ಲಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಚಂದನ್ ಶೆಟ್ಟಿ ಕೂಡಾ ಕಾಣಿಸಿಕೊಂಡಿದ್ದಾರೆ.

ಎA.ಕೆ. ಆರ್ಟ್ಸ್ ಲಾಂಛನದಲ್ಲಿ ಮೋನಿಕಾ ಕಲ್ಲೂರಿ ಅವರು ಈ ಆಲ್ಬಂ ಸಾಂಗ್ ನಿರ್ಮಿಸಿದ್ದು ಗುರುವಾರ ಹಾಡಿನ ಬಿಡುಗಡೆ ಸಮಾರಂಭ ನಡೆದಿದೆ. ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಈ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಸಂಗೀತ ನೀಡಿ, ಹಾಡಿರುವ ಚಂದನ ಶೆಟ್ಟಿ ಮಾತನಾಡಿ ಲಾಕ್‌ಡೌನ್ ಆರಂಭವಾಗಿ ವಾರದ ನಂತರ ಸುಮಿತ್ ನನಗೆ ಲಿರಿಕ್ಸ್ ಕಳಿಸಿ ಟ್ಯೂನ್ ಮಾಡುವಂತೆ ಹೇಳಿದರು.

ಹಾಡಿಗೆ ಬಂಡವಾಳ ಹೂಡಿರುವ ಮೋನಿಕಾ ಕಲ್ಲೂರಿ ಮಾತನಾಡಿ, ಸಿನಿಮಾ ರಂಗದಲ್ಲಿ ಏನಾದರೂ ಮಾಡಬೇಕು ಅಂದುಕೊಂಡಿದ್ದೆ ಅದು ಇಷ್ಟು ಬೇಗ ಈಡೇರಲಿದೆ ಅಂದುಕೊಂಡಿರಲಿಲ್ಲ. ಕಳೆದ ವರ್ಷವೇ ಸುಮಿತ್ ಅವರನ್ನು ಭೇಟಿಯಾಗಿದ್ದೆ.

ಅವರು ಬರೆದ ಲಿರಿಕ್ಸ್ ಬಹಳ ಇಷ್ಟವಾಯ್ತು. ಯಾರ ಬಳಿ ಹಾಡಿಸಬೇಕು ಎಂದು ಬಹಳ ಯೋಚಿಸಿ ಕೊನೆಗೆ ಚಂದನ್ ಶೆಟ್ಟಿ ಅವರನ್ನೇ ಫಿಕ್ಸ್ ಮಾಡಿದೆವು. ಅವರೂ ಸಾಥ್ ನೀಡಿದರು. ಅಷ್ಟೇ ಚೆನ್ನಾಗಿ ಹಾಡು ಮೂಡಿಬಂದಿದೆ. ಚಿಕ್ಕ ಪ್ರಾಜೆಕ್ಟ್ ಅಂದುಕೊಂಡಿದ್ದೆವು. ಅದೀಗ ದೊಡ್ಡ ಬಜೆಟ್‌ನಲ್ಲೇ ಸಿದ್ಧವಾಗಿದೆ ಎಂದರು.

Related