ಬೇಸಿಗೆಯಲ್ಲಿ ಕೂದಲಿನ ʼಆರೈಕೆʼ ಹೀಗಿರಲಿ

 ಬೇಸಿಗೆಯಲ್ಲಿ ಕೂದಲಿನ ʼಆರೈಕೆʼ ಹೀಗಿರಲಿ

ಮಾ. 16 :  ಬೇಸಿಗೆ ಕಾಲ ಬಂದೇ ಬಿಟ್ಟಿದೆ. ಋತುಮಾನ ಬದಲಾದಂತೆ ನಮ್ಮ ದೇಹದಲ್ಲೂ ಬದಲಾವಣೆಯಾಗುತ್ತದೆ. ತಲೆಕೂದಲು, ಮುಖದ ಚರ್ಮದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ಬೆವರಿಗೆ ತಲೆಕೂದಲಿನ ಬುಡದಲ್ಲಿ ತುರಿಕೆ, ಹುಣ್ಣುಗಳು ಕಾಣಿಸಿಕೊಳ್ಳುವುದಕ್ಕೆ ಶುರು. ಹಾಗಾಗಿ ಬೇಸಿಗೆಯಲ್ಲಿ ತಲೆಕೂದಲಿನ ಕಾಳಜಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಇಲ್ಲಿದೆ ಒಂದಷ್ಟು ಟಿಪ್ಸ್. ಹದವಾಗಿ ಬಿಸಿ ಇರುವ ತೆಂಗಿನೆಣ್ಣೆ, ಆಲೀವ್ ಎಣ್ಣೆ ಯಾವುದಾದರೂ ತೆಗೆದುಕೊಂಡು ಹತ್ತಿಯ ಸಹಾಯದಿಂದ ನಿಮ್ಮ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. 2 ಗಂಟೆ ಬಿಟ್ಟು ಯಾವುದಾದರೂ ಸೌಮ್ಯ ಶಾಂಪೂವಿನಿಂದ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಬೇಸಿಗೆಯಲ್ಲೂ ನಿಮ್ಮ ಕೂದಲು ನಳನಳಿಸುತ್ತಿರುತ್ತದೆ. ತಲೆ ಕೂದಲು ಬಾಚುವುದಕ್ಕೆ ಅಗಲವಾದ ಹಲ್ಲಿನ ಬಾಚಣಿಕೆಯನ್ನು ಉಪಯೋಗಿಸಿ. ಇದರಿಂದ ಸುಕ್ಕುಗಳನ್ನು ಬಿಡಿಸಿಕೊಳ್ಳಲು ಸುಲಭವಾಗುತ್ತದೆ. 1 ಬಾಳೆ ಹಣ್ಣು ತೆಗೆದುಕೊಂಡು ಚೆನ್ನಾಗಿ ಕಿವುಚಿ. ಅದಕ್ಕೆ 3 ದೊಡ್ಡ ಚಮಚ ಮೊಸರು, 1 ಚಮಚ ಲಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ತಲೆಗೆ ಹೇರ್ ಪ್ಯಾಕ್ ರೀತಿ ಹಚ್ಚಿಕೊಳ್ಳಿ ಇದರಿಂದ ಕೂದಲು ಸೀಳುವಿಕೆ, ಉದುರುವಿಕೆ ಕಡಿಮೆಯಾಗುತ್ತದೆ. 2 ಚಮಚ ಮೆಂತೆಯನ್ನು ರಾತ್ರಿ ನೆನೆಸಿ ಇಡಿ. ಬೆಳಿಗ್ಗೆ ಮಿಕ್ಸಿ ಜಾರಿಗೆ ಈ ಮೆಂತೆಕಾಳು 2 ಚಮಚ ಅಲೋವೆರ ಜೆಲ್, 2 ಚಮಚ ಮೊಸರು ಸೇರಿಸಿ ರುಬ್ಬಿಕೊಳ್ಳಿ. ಇದನ್ನು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.

Related