ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಬಾರದು: ಸುಧಾ ಮೂರ್ತಿ

ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಬಾರದು: ಸುಧಾ ಮೂರ್ತಿ

ಬೆಂಗಳೂರು: ಈಗಿರುವ ಯುವ ಪೀಳಿಗೆಗಳೇ ಮುಂದಿನ ದೇಶದ ಆಳುವ ಪ್ರಜೆಗಳಾಗಬಹುದು ಆದ್ದರಿಂದ ಮಕ್ಕಳಿಗೆ ಶಿಕ್ಷಣ ನೀಡಬೇಕಾದರೆ ನಾವು ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬಾರದೆಂದು ಖ್ಯಾತ ಉದ್ಯಮಿ ನಾರಾಯಣ ಸುಧಾ ಮೂರ್ತಿಯವರು ಹೇಳಿದ್ದಾರೆ.

ನಗರದಲ್ಲಿಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಡಿಕೆ ನಗರದ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಲಾಗಿರುವ ಬ್ರ್ಯಾಂಡ್ ಬೆಂಗಳೂರು ಯುವ ನಾಯಕತ್ವ ಸಮ್ಮೇಳನದಲ್ಲಿ ಭಾಗವಹಿಸಿ ಮಾತಾಡಿದ ಅವರು, ಮಕ್ಕಳ ಮನಸ್ಸು ಒಂದು ಒದ್ದೆ ಗೋಡೆಯ ಹಾಗಿರುತ್ತದೆ, ಶಿಕ್ಷಕರು ಹೇಳುವ ಮಾತುಗಳು ಅಲ್ಲಿ ನೆಟ್ಟುಬಿಡುತ್ತವೆ, ಸ್ವಲ್ಪ ಸಮಯದ ಬಳಿಕ ಗೋಡೆ ಒಣಗಿಬಿಡುತ್ತದೆ ಆದರೆ ಮನದಲ್ಲಿ ನಾಟಿದ ಸಂಗತಿಗಳು ಹಾಗೆಯೇ ಉಳಿದುಬಿಡುತ್ತವೆ ಎಂದು ಹೇಳಿದರು.

ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಬಾರದು, ಅವರ ಮನಸ್ಸು ಒಂದು ಖಾಲಿ ಹಾಳೆಯಂತಿರುತ್ತದೆ ಎಂದು ಹೇಳಿ, ಕೋರಾ ಕಾಗಜ್ ಥಾ ಏ ಮನ್ ಮೇರಾ ಎಂಬ ಹಳೆಯ ಹಿಂದಿ ಹಾಡಿನ ಮೊದಲು ಸಾಲನ್ನು ಹೇಳುತ್ತಾ ದ್ವಂದ್ವ ಮತ್ತು ತಾರತಮ್ಯವಿಲ್ಲದ ಮನಸ್ಸಿನಲ್ಲಿ ಉಜ್ಬಲ ಅಲೋಚನೆಗಳು ಹುಟ್ಟುತ್ತವೆ, ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಯ ಚಾರಿತ್ರ್ಯವನ್ನು ರೂಪಿಸುತ್ತಿರುವ ಶಿಕ್ಷಕರ ಮನಸ್ಸು ಪೂರ್ವಾಗ್ರಹ ಪೀಡಿತವಾಗಿರಬಾರದು ಎಂದರು.

ಈ ಸಂದರ್ಭದಲ್ಲಿ ಖ್ಯಾತ ನಟ ರಮೇಶ್ ಅರವಿಂದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related