ರಾಜಧಾನಿಯಲ್ಲಿ ಕನ್ನಡ ನಾಮಪಲಕ ಅಳವಡಿಕೆಗೆ ಆಗ್ರಹಿಸಿ ಹೋರಾಟ

ರಾಜಧಾನಿಯಲ್ಲಿ ಕನ್ನಡ ನಾಮಪಲಕ ಅಳವಡಿಕೆಗೆ ಆಗ್ರಹಿಸಿ ಹೋರಾಟ

ಬೆಂಗಳೂರು: ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಭಾಷೆ ಮಾಯವಾಗುತ್ತಿದೆ ಎಂದು ಹೇಳಲಾಗುತ್ತಿದೆ ಎಲ್ಲಿ ನೋಡಿದರಲ್ಲಿ ಆಂಗ್ಲ ಭಾಷೆಯ ನಾಮ ಬಲಕ ರಾರಾಜಿಸುತ್ತಿವೆ.

ಇನ್ನು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗಿ ಆಂಗ್ಲ ಭಾಷೆ ಮತ್ತು ಹಿಂದಿ, ತೆಲುಗು, ತಮಿಳು, ಬಳಸುವುದರಿಂದ ನಮ್ಮ ಕರ್ನಾಟಕದಲ್ಲಿ ನಮ್ಮ ಕನ್ನಡ ಭಾಷೆಗೆ ಬೆಲೆ ಇಲ್ಲದಂತಾಗಿದೆ ಎಂದು ಇಂದು ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯ ಸಾದಹಳ್ಳಿ ಬಳಿ ಸೇರಿರುವ ಕಾರ್ಯಕರ್ತರು, ಇಂಗ್ಲಿಷ್ ಬೋರ್ಡ್ ಗಳನ್ನು ಧ್ವಂಸಗೊಳಿಸಿದ್ದಾರೆ. ಹೆದ್ದಾರಿಯ ಬದಿಯ ದೊಡ್ಡ ದೊಡ್ಡ ಹೋಲ್ಡರ್ ಗಳ ಮೇಲೆ ಹತ್ತಿದ ಕಾರ್ಯಕರ್ತರು ಇಂಗ್ಲಿಷ್​ನಲ್ಲಿ ಹಾಕಲಾಗಿರುವ ಫಲಕಗಳನ್ನು ಧ್ವಂಸಗೊಳಿಸಿದ್ದಾರೆ. ಮಾಲ್​ಗಳ ಮುಂದೆ ಇರೋ ಇಂಗ್ಲಿಷ್ ಬೋರ್ಡ್ ಇರೋ ಕಾರಣ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಕೆಆರ್ ಪುರಂ, ಹೆಬ್ಬಾಳ, ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

Related