ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ಆನೇಕಲ್ : ಕೊರೋನ ವ್ಯಾಪಕವಾಗಿ ಹರಡುತ್ತಿದ್ದರು ಆನೇಕಲ್ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕುರಿ ಮಂದೆಯಂತೆ ಸೇರುತ್ತಿದ್ದು ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ವ್ಯವಸ್ಥೆಯಾಗಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿದ್ದಾರೆ, ಸಾರ್ವಜನಿಕ ದೂರಿನ ಹಿನ್ನೆಲೆ ತಹಸಿಲ್ದಾರ್ ಮಹದೇವಯ್ಯನವರು ಸಬ್ ರಿಜಿಸ್ಟರ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದು ಸಾರ್ವಜನಿಕ ಕಚೇರಿ ಪ್ರತಿದಿನ ಸಾವಿರಾರು ಜನ ಬರುತ್ತಾರೆ. ಶಿಸ್ತು, ಸಾಮಾಜಿಕ ಅಂತರ, ಸ್ಯಾನಿಟೈಸರ್ ಮಾಡುವುದು ಇದು ನಿಮ್ಮ ಕರ್ತವ್ಯವಾಗಿರುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ನಿಯಮಗಳ ಗಾಳಿಗೆ ತೂರಿ ನಡೆದುಕೊಂಡರೆ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದೆಂದು ಅಧಿಕಾರಿ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು.

ರೋಗಿಗಳಿಗೆ 3 ಲಕ್ಷ ದಿಂದ 4 ಲಕ್ಷ, ಬಿಲ್ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಆಸ್ಪತ್ರೆಗೆಯ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ಹಾಗೂ ಮಾಲೀಕರ ಜೊತೆ ಚರ್ಚಿಸಿ. ಸೋಂಕಿತರಿಗೆ ಯಾವುದೇ ತೊಂದರೆಯನ್ನು ನೀಡಬಾರದು ಒಂದೆರಡು ದಿನ ತಡವಾದರೂ ಸರ್ಕಾರದಿಂದ ಹಣ ಪಾವತಿಸಲಾಗುವುದು ಖಾಲಿ ಇದ್ದರೆ ಸೋಂಕಿತರನ್ನು ಸೇರಿಸಿಕೊಳ್ಳಬೇಕು ಎಂದು ಎಚ್ಚರಿಕೆಯನ್ನು ನೀಡಿದರು.

Related