ಮತ್ತಷ್ಟು ಸಂಕಷ್ಟಕೊಳಗಾದ ಸೋನು ಶ್ರೀನಿವಾಸ ಗೌಡ…!

ಮತ್ತಷ್ಟು ಸಂಕಷ್ಟಕೊಳಗಾದ ಸೋನು ಶ್ರೀನಿವಾಸ ಗೌಡ…!

ಬೆಂಗಳೂರು: ಸೋನು ಶ್ರೀನಿವಾಸ ಗೌಡ ಅವರು ಒಂದಲ್ಲಾ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಯಾಗುತ್ತಲೇ ಇರುತ್ತಾರೆ.

ಕಳೆದ ಕೆಲವು ವರ್ಷಗಳ ಹಿಂದೆ ರೀಲ್ಸ್ ಮತ್ತು ಟಿಕ್​ಟಾಕ್ ಮಾಡುವ ಮೂಲಕ ಜನಪ್ರಿಯನ್ನು ಹೊಂದಿದ್ದ ಸೋನು ಶ್ರೀನಿವಾಸ ಗೌಡ ತಮ್ಮ ಒಂದು ಖಾಸಗಿ ವಿಡಿಯೋ ಲೀಕ್ ಆಗಿ ಹೆಚ್ಚು ಸುದ್ದಿ ಆಗಿದ್ದರು. ಇದಾದ ಬಳಿಕ ಕನ್ನಡ ಬಿಗ್ ಬಾಸ್ ಓಟಿಪಿಯಲ್ಲಿ ಕಂಟೆಸ್ಟೆಂಟ್ ಆಗಿ ಸ್ಪರ್ಧೆ ಮಾಡುವ ಮೂಲಕ ಮತ್ತಷ್ಟು ಜನ ಪ್ರಿಯತೆಯನ್ನು ಹೊಂದಿದರು.

ಇನ್ನು ಅಕ್ರಮವಾಗಿ ಮಗುವೊಂದನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿರುವ ಸೋನು ಶ್ರೀನಿವಾಸ ಗೌಡ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಹೌದು, ರಾಯಚೂರು ಮೂಲದ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿ ಸೋನು ಶ್ರೀನಿವಾಸ ಗೌಡರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಸೋನು ಶ್ರೀನಿವಾಸ ಗೌಡ ಅವರು ತಮ್ಮ ಬಿಡುಗಡೆಗಾಗಿ ಜಾಮೀನುಪಡೆಯಲು ಪ್ರಯತ್ನ ಪಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸೋನು ಶ್ರೀನಿವಾಸ ಗೌಡ ಅವರು ಕಳೆದ ವಾರ ಅರೆಸ್ಟ್ ಆದರು. ಆ ಬಳಿಕ ಈ ಪ್ರಕರಣದಲ್ಲಿ ಅವರನ್ನು 4 ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದ್ದರು. ಈಗ ನ್ಯಾಯಾಂಗ ಬಂಧನ ವಿಧಿಸಿ CJM ನ್ಯಾಯಾಲಯ ಆದೇಶ ಹೊರಡಿಸಿದೆ.

 

Related