ಸೋನು ಸೂದ್ ಕಟ್ ಔಟ್ ಗೆ ಅಭಿಮಾನಿಗಳ ಹಣ

ಸೋನು ಸೂದ್ ಕಟ್ ಔಟ್ ಗೆ ಅಭಿಮಾನಿಗಳ ಹಣ

ಇತ್ತೀಚಿನ ಸೋನು ಸೂದ್ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾ ಮೂಲಕ ಸೋನು ಸೂದ್ ಅಭಿಮಾನಗಳ ಮುಂದೆ ಬಂದಿದ್ದರು. ತೆರೆಮೇಲೆ ಇವರನ್ನು ನೋಡುತ್ತಿದ್ದರಂತೆ ಅಭಿಮಾನಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನೋಟ್ ಎಸೆದು ಕುಣಿದು ಕುಪ್ಪಳಿಸಿದ್ದಾರೆ.

ಬಹುಬಾಷಾ ನಟ, ರಿಯಲ್ ಹೀರೋ ಸೋನು ಸೂದ್ ತಮ್ಮ ಸಾಮಾಜಿಕ ಕೆಲಸಗಳನ್ನು ಈಗಲೂ ಮುಂದುವರೆಸಿದ್ದಾರೆ. ಕೊರೋನಾ ಭೀಕರ ಪರಿಸ್ಥತಿಯಿಂದ ಹೊರಬಂದ ಮೇಲು ಸೋನು ಸೋದ್ ತಮ್ಮ ಸಮಾಜಮುಖಿ ಕೆಲಸವನ್ನು ನಿಲ್ಲಿಸಿಲ್ಲ. ಕಷ್ಟ ಎಂದವರ ಪಾಲಿಗೆ ನೆರವಾಗುತ್ತಿರುವ ಇವರು ಸಾಕಷ್ಟು ಜನರ ಪಾಲಿಗೆ ದೇವರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸೋನು ಸೂದ್ ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ.

ಈ ನಡುವೆ ಸೋನು ಸೂದ್ ಸಿನಿಮಾಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಇತ್ತಿಚಿಗಷ್ಟೆ ಸೋನು ಸೂದ್ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾ ಮೂಲಕ ಇನ್ನಷ್ಟು ಅಭಿಮಾನಿಗಳ ಹೃದಯಗಳನ್ನ ಗಳಿಸಿದ್ದಾರೆ.

ಸೋನು ಸೂದ್ ಮೇಲಿನ ಪ್ರೀತಿಯನ್ನು ಅಭಿಮಾನಿಗಳು ನಾನಾರೀತಿ ವ್ಯಕ್ತಪಡಿಸುತ್ತಾರೆ ಇವರನ್ನ  ನೋಡಲು ಅಭಿಮಾನಿಗಳು ಆತುರದಿಂದ ಕಾಯುತ್ತಿರುತ್ತಾರೆ. ಅದೆಷ್ಟೋ ಅಭಿಮಾನಿಗಳು ಮುಂಬೈನಲ್ಲಿರುವ ಇವರ ನಿವಾಸಕ್ಕೆ ಹೋಗಿ ಬೇಟಿಯಾಗಿ ಮಾತನಾಡುತ್ತಾರೆ. ಹೀಗಿರುವಾಗ ತೆರೆಮೇಲೆ ಸೋನು ಸೂದ್ ನೋಡಿ ಫುಲ್ ಖುಷ್ ಆಗಿ ಅಭಿಮಾನಿಗಳು ಹಣ ಚೆಲ್ಲಿದ್ದಾರೆ. ಈ ವಿಡಿಯೋ ನೋಡಿ ಭಾವುಕರಾಗಿರುವ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ .

“ಧನ್ಯವಾದಗಳು ನನ್ನ ಪ್ರೀತಿಯ ಅಭಿಮಾನಿಗಳಿಗೆ. ನಾನು ಹೆಮ್ಮೆಯಿಂದ ನನ್ನ ಕುಟುಂಬ  ಎಂದು ಕರೆಯುತ್ತೇನೆ”. ‘ಲವ್ ಯೂ ಆಲ್ ಎಂದು ಹೇಳಿದ್ದಾರೆ’.

 

Related