ಕೆಲವು ಪ್ರಮುಖ ರಸ್ತೆಗಳ ಯೋಜನೆಗಳು ಅ. 31 ರೊಳಗೆ ಪೂರ್ಣಗೊಳ್ಳಲಿವೆ

ಕೆಲವು ಪ್ರಮುಖ ರಸ್ತೆಗಳ ಯೋಜನೆಗಳು ಅ. 31 ರೊಳಗೆ ಪೂರ್ಣಗೊಳ್ಳಲಿವೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯೋಜನೆಗಳ ವಿಭಾಗದಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯ ಆಯುಕ್ತರು ಪರಿಶೀಲನಾ ಸಭೆ ನಡೆಸಿದರು.

ಮುಂದಿನ ದಿನಗಳಲ್ಲಿ ದೀಪಾವಳಿ, ಕನ್ನಡ ರಾಜ್ಯೋತ್ಸವ ಹಬ್ಬಗಳು ಮತ್ತು ಬೆಂಗಳೂರು ನಗರದಲ್ಲಿ ನಿಗದಿತ ಜಾಗತಿಕ ಹೂಡಿಕೆದಾರರ ಸಭೆ ಜರಗಲಿರುವುದರಿಂದ ಚಾಲ್ತಿಯಲ್ಲಿರುವ ಕೆಲವು ಪ್ರಮುಖ ಯೋಜನೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು 31 ಅಕ್ಟೋಬರ್ 2022 ರೊಳಗೆ ಪೂರ್ಣಗೊಳಿಸುವ ಗುರಿ ನೀಡಲಾಗಿದೆ.

31ನೇ ಅಕ್ಟೋಬರ್ 2022ರ ಒಳಗೆ ರಸ್ತೆ/ಯೋಜನೆಗಳ ಕಾಮಗಾರಿಗಳನ್ನು ಹವಾಮಾನಕ್ಕೆ ಅನುಗುಣವಾಗಿ ಪೂರ್ಣಗೊಳಿಸಲು ಯೋಜಿಸಲಾಗಿದ್ದು, ಎಲ್ಲಾ ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಬೆಂಗಳೂರು ನಗರದ ನಾಗರಿಕರಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಲು ಪಾಲಿಕೆ ಕೋರಿದೆ.

 

Related