ಪ್ರಜ್ವಲ್ ರೇವಣ್ಣರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ: ಎಚ್.ಡಿ.ಕೆ

ಪ್ರಜ್ವಲ್ ರೇವಣ್ಣರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ: ಎಚ್.ಡಿ.ಕೆ

ಬೆಂಗಳೂರು: ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್ ಐ ಟಿ ತಂಡಕ್ಕೆ ವರ್ಗಾವಣೆ ಮಾಡಿದ್ದು, ಎಸ್ಐಟಿ ತಂದ ಭರ್ಜರಿ ತನಿಖೆ ನಡೆಸಲು ಮುಂದಾಗಿದೆ.

ಇನ್ನು ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಿಸುವ ಮಾತೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಮಹಾನಟಿ ಶೋ ವಿರುದ್ಧ ದೂರು ದಾಖಲು..!

ನಗರದಲ್ಲಿದ್ದು ಮಾಧ್ಯಮ ಪ್ರತಿನಿಧಿಗಳ ಬಗ್ಗೆ ಮಾತನಾಡಿದ ಅವರು, ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ; ಆದರೆ ಹೆಚ್ಚಿನ ಹೊಣೆಗಾರಿಕೆ ಇರುವುದು ಸರ್ಕಾರದ ಮೇಲೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಕೇವಲ ಚಿಕ್ಕಪ್ಪನಾಗಿ ಮಾತ್ರವಲ್ಲದೇ ದೇಶದ ಜನಸಾಮಾನ್ಯನಾಗಿ ಕೂಡಾ ನಾವು ಮುನ್ನಡೆಯಬೇಕಾಗಿದೆ. ಇದು ನಾಚಿಕೆಗೇಡಿನ ಪ್ರಕರಣ. ನಾನು ಯಾರನ್ನೂ ರಕ್ಷಿಸುತ್ತಿಲ್ಲ. ಈ ಬಗೆಯ ಕಾನೂನುಬಾಹಿರ ಕೃತ್ಯಗಳ ವಿರುದ್ಧ ನಾವು ಹೋರಾಡುತ್ತಾ ಬಂದಿದ್ದೇವೆ. ಇದು ಗಂಭೀರ ಪ್ರಕರಣ. ಸರ್ಕಾರವನ್ನು ನಡೆಸುತ್ತಿರುವವರು ನೈಜ ಚಿತ್ರಣವನ್ನು ಬಹಿರಂಗಪಡಿಸಬೇಕು. ತಳಮಟ್ಟದ ವಾಸ್ತವತೆಯನ್ನು ಬಹಿರಂಗಪಡಿಸುವುದು ಸರ್ಕಾರದ ಕೆಲಸವೇ ವಿನಃ ನನ್ನದಲ್ಲ ಎಂದು ಹೇಳಿದ್ದಾರೆ.

Related