ಕಾಂಗ್ರೆಸ್ ಪಕ್ಷದ ಗೆಲುವಿಗೆ ನಮ್ಮ ಅಭಿವೃದ್ಧಿ ಯೋಜನೆಗಳೆ ಶ್ರೀರಕ್ಷೆ: ಮುನಿಯಪ್ಪ

ಕಾಂಗ್ರೆಸ್ ಪಕ್ಷದ ಗೆಲುವಿಗೆ ನಮ್ಮ ಅಭಿವೃದ್ಧಿ ಯೋಜನೆಗಳೆ ಶ್ರೀರಕ್ಷೆ: ಮುನಿಯಪ್ಪ

ದೇವದುರ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ರಾಯಚೂರು ಜಿಲ್ಲೆಯ ಲೋಕಸಭಾ ಕ್ಷೇತ್ರದ ಗೆಲುವಿನ ತಂತ್ರಗಾರಿಕೆಯ  ಕುರಿತು ಇಂದು ದೇವದುರ್ಗದಲ್ಲಿ ಮುಖಂಡರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಸಭೆಯನ್ನು ನಡೆಸಿದರು.

ನಂತರ ಮಾತನಾಡಿದ ಅವರು, ನಮ್ಮ ಪಕ್ಷ ಬಡವರ, ರೈತರ ಹಾಗೂ ಹಿಂದುಳಿದವರ ಪರವಾದ ಪಕ್ಷವಾಗಿದ್ದು ನಾವು ನೀಡಿರುವ ಗ್ಯಾರಂಟಿ ಗಳು ಎಲ್ಲಾ ವರ್ಗದ ಜನರಿಗೂ ತಲುಪಿದೆ ನಮ್ಮ 5 ಗ್ಯಾರಂಟಿ ಯೋಜನೆಗಳೆ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರೀ ರಕ್ಷೆ ಯಾಗಲಿದೆ.  ಇದನ್ನೂ ಓದಿ: ಪ್ರಜ್ವಲ್ ರೇವಣ್ಣರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ: ಎಚ್.ಡಿ.ಕೆ

ಕೇಂದ್ರ ಸರ್ಕಾರದ ಮಲತಾಯಿ ದೋರಣೆಯಿಂದ ರಾಜ್ಯ ಕ್ಕೆ ಸಿಗಬೇಕಾದ ಬರಪರಿಹಾರ ಪೂರ್ಣ ಟಪ್ರಮಾಣದಲ್ಲಿ ಸಿಗಲಿಲ್ಲಾ. ನಮ್ಮ ಪಕ್ಷ ಕೇಂದ್ರ ದಲ್ಲಿ ಸರ್ಕಾರ ವಿದ್ದಾಗ ರೈತರ ಸುಮಾರು 72 ಸಾವಿರ ಕೋಟಿ ರೂಗಳಷ್ಟು ಸಾಲ‌ಮನ್ನಾ ಮಾಡಿದ್ದೇವೆ. ಈಗಿನ ಈ ಬಿಜೆಪಿ ಸರ್ಕಾರ ರೈತರಿಗೆ ಯಾವುದೇ ಸಾಲ ಮಾನ್ನಾ ಮಾಡದೆ ವಿಫಲವಾಗಿದೆ.

ನಮ್ಮ ಪಕ್ಷದ ಪ್ರಣಾಳಿಕೆ ಯಂತೆ ನಾವು ಪ್ರತಿ ಕುಟುಂಬದ ಯಜಮಾನಿಗೆ ಒಂದು ವರ್ಷಕ್ಕೆ 1ಲಕ್ಷ ಹಣವನ್ನು ನೀಡುವುದು ಹಾಗೂ ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸುವುದು, ರೈತರಿಗೆ ಎಂಎಸ್ ಪಿ ಕಲ್ಲಿಸುವುದು, ಮಹಿಳೆಯರ ರಕ್ಷಣೆ ದೇಶದ ರಕ್ಷಣೆ ಮಾಡುವುದು ನಮ್ಮ ಗುರಿಯಾಗಿದೆ.

ನಮ್ಮ ಪಕ್ಷದ ಹೆಚ್ಚಿನ ಸಂಸದರನ್ನು ಗೆಲ್ಲಿಸಿ ಸಂಸತ್ತಿಗೆ ಕಲುಹಿಸಿದಾಗ ನಮಗೆ ಅನುಕೂಲ ಇರುತ್ತದೆ. ದೇವದುರ್ಗದ ಎಲ್ಲಾ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿ ಕುಮಾರ್ ನಾಯ್ಕ್ ರವರ ಗೆಲುವಿಗೆ ಶ್ರಮಿಸಬೇಕು ಎಂದರು.

ದೇಶದಲ್ಲಿ ಕೋಮುಗಲಬೆಗಳನ್ನು ಕಡಿಮೆ ಮಾಡಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಬೇಕು ಈ ದೇಶಕ್ಕೆ ಸ್ವಾತಂತ್ರ ತರಲು ಎಲ್ಲಾ ಧರ್ಮ ದವರು ತ್ಯಾಗ ಬಲಿದಾನಗಳು ಇವೆ ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಬೇಕು ಎಂದರು.

ಈ ಸಂದರ್ಭದಲ್ಲಿ ಎಐಸಿಸಿ ಸಹ ಉಸ್ತುವಾರಿಗಳಾದ ಅಭಿಷೇಕ್ ದತ್, ರಾಯಚೂರು ಜಿಲ್ಲಾ‌ ಘಟಕದ ಅಧ್ಯಕ್ಷರಾದ ಬಸವರಾಜ ಪಾಟೀಲ್ ಇಟಗಿ, ಹಾಗೂ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related